ಟೆಸ್ಟ್: ಇಂಗ್ಲೆಂಡ್‌ ವಿರುದ್ಧ ನ್ಯೂಜಿಲೆಂಡ್ ಉತ್ತಮ ಮೊತ್ತ ನಾಟಿಂಗ್‌ಹ್ಯಾಂ: ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಉತ್ತಮ ಆಟದ ನೆರವಿನಿಂದ ನ್ಯೂಜಿಲೆಂಡ್‌ ತಂಡ, ಇಂಗ್ಲೆಂಡ್‌ ವಿರುದ್ಧದ ಎರಡನೇ ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲಿ ಉತ್ತಮ ಮೊತ್ತದತ್ತ ಹೆಜ್ಜೆಯಿಟ್ಟಿದೆ. ಟಾಸ್‌ ಗೆದ್ದ ಇಂಗ್ಲೆಂಡ್‌ ತಂಡ ಫೀಲ್ಡಿಂಗ್‌ ಆಯ್ಕೆ ಮಾಡಿತು. ನ್ಯೂಜಿ ಲೆಂಡ್‌ ತಂಡ ಮೊದಲ ದಿನ ದಾಟದ ಚಹಾ ವಿರಾಮದ ವೇಳೆಗೆ 69 ಓವರ್‌ ಗಳಲ್ಲಿ 4ಕ್ಕೆ 271 ರನ್‌ ಗಳಿಸಿದೆ. ಟಾಮ್‌ ಲಥಾಮ್‌ ಮತ್ತು ವಿಲ್‌ ಯಂಗ್ ಮೊದಲ ವಿಕೆಟ್‌ಗೆ 84 ರನ್‌ ಸೇರಿಸಿ ಉತ್ತಮ ಆರಂಭ ನೀಡಿದರು. ಬಳಿಕ ಡೆವೊನ್‌ ಕಾನ್ವೆ, ಹೆನ್ರಿ ನಿಕೊಲಸ್‌ ಉತ್ತಮ ಆಟವಾಡಿದರು. ಸಂಕ್ಷಿಪ್ತ ಸ್ಕೋರ್‌: ಮೊದಲ ಇನಿಂಗ್ಸ್‌; ನ್ಯೂಜಿಲೆಂಡ್ 69 ಓವರ್‌ಗಳಲ್ಲಿ 4ಕ್ಕೆ 271 (ಟಾಮ್‌ ಲಥಾಮ್ 26, ವಿಲ್‌ ಯಂಗ್ 47, ಡೆವೊನ್‌ ಕಾನ್ವೆ 46, ಹೆನ್ರಿ ನಿಕೊಲಸ್ 30, ಡೆರಿಲ್‌ ಮಿಚೆಲ್‌ ಬ್ಯಾಟಿಂಗ್ 56, ಟಾಮ್‌ ಬ್ಲಂಡೆಲ್‌ ಬ್ಯಾಟಿಂಗ್ 46, ಜೇಮ್ಸ್‌ ಆ್ಯಂಡರ್ಸನ್‌ 35ಕ್ಕೆ 2, ಬೆನ್‌ ಸ್ಟೋಕ್ಸ್ 40ಕ್ಕೆ 2). ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.