ವೃದ್ಧಿಮಾನ್‌ ಸಹಾಗೆ ನಿರಾಕ್ಷೇಪಣಾ ಪತ್ರ: ಸಿಎಬಿ ಜತೆಗಿನ ಒಡನಾಟ ಅಂತ್ಯ ಕೋಲ್ಕತ್ತ: ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್‌ ವೃದ್ಧಿಮಾನ್ ಸಹಾ ಅವರಿಗೆ ಬಂಗಾಳ ಕ್ರಿಕೆಟ್‌ ಸಂಸ್ಥೆಯು (ಸಿಎಬಿ) ಬೇರೆ ರಾಜ್ಯದ ಪರ ಆಡಲು ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಪತ್ರ ನೀಡಿದೆ. ಇದರೊಂದಿಗೆ ಸಂಸ್ಥೆಯೊಂದಿಗಿನ 15 ವರ್ಷಗಳ ಒಡನಾಟವನ್ನು ಅವರು ಕಡಿದುಕೊಂಡಿದ್ದಾರೆ. ಭಾರತ ತಂಡದ ಪರ 40 ಟೆಸ್ಟ್‌ಗಳನ್ನುಸಹಾ ಆಡಿದ್ದಾರೆ. ಬರುವ ಅಕ್ಟೋಬರ್‌ಗೆ ಅವರು 38ನೇ ವಯಸ್ಸಿಗೆ ಕಾಲಿಡಲಿದ್ದಾರೆ. ವಯಸ್ಸಾದ ಎರಡನೇ ವಿಕೆಟ್‌ಕೀಪರ್ ತಮಗೆ ಅಗತ್ಯವಿಲ್ಲ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಹೇಳಿತ್ತು. ಇದಾದ ಬಳಿಕ ಸಹಾ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರನ್ನು ಟೀಕಿಸುತ್ತಿದ್ದರು. : ಒಂದೇ ಓವರ್‌ನಲ್ಲಿ 35 ರನ್; ಯುವಿ ನೆನಪಿಸಿದ ಬೂಮ್ರಾ: ಸಚಿನ್ ಗುಣಗಾನ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದ ಅವರು ಇತ್ತೀಚೆಗೆ ಬಂಗಾಳ ತಂಡದಿಂದಲೂ ದೂರವಾಗಿದ್ದರು. ಸಿಎಬಿ ಜಂಟಿ ಕಾರ್ಯದರ್ಶಿ ದೇವವ್ರತ ದಾಸ್‌ ಅವರು ಸಹಾ ನಿರ್ಧಾರವನ್ನು ಟೀಕಿಸಿದ್ದರಲ್ಲದೆ, ಅವರ ಬದ್ಧತೆಯನ್ನು ಪ್ರಶ್ನಿಸಿದ್ದರು. ಇತ್ತೀಚೆಗೆ ಸಹಾ ಅವರು ಆಟಗಾರ ಮತ್ತು ಮಾರ್ಗದರ್ಶಿಯಾಗಲುತ್ರಿಪುರ ತಂಡದೊಂದಿಗೆ ಮಾತುಕತೆ ನಡೆಸಿದ್ದರು. ಆದರೆ ಒಪ್ಪಂದ ಮಾಡಿಕೊಳ್ಳಲು ’ಹೆಚ್ಚಿನ ಶುಲ್ಕಕ್ಕೆ‘ ಬೇಡಿಕೆ ಇಟ್ಟಿದ್ದರು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. 5th | ಟೆಸ್ಟ್ ಇತಿಹಾಸದಲ್ಲೇ ದುಬಾರಿ ಓವರ್ ಎಸೆದ ಬ್ರಾಡ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.