2022: ಗಾಯದ ಮೇಲೆ ಬರೆ; ರೋಹಿತ್ ಶರ್ಮಾಗೆ ₹24 ಲಕ್ಷ ದಂಡ ಮುಂಬೈ: ಐಪಿಎಲ್ 2022 ಟೂರ್ನಿಯಲ್ಲಿ ಸತತ ಐದು ಸೋಲುಗಳ ಮುಖಭಂಗಕ್ಕೆ ಒಳಗಾಗಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ ಮಗದೊಂದು ಕಹಿ ಸುದ್ದಿ ಎದುರಾಗಿದೆ. ನಿಧಾನಗತಿಯ ಓವರ್‌ರೇಟ್‌ಗಾಗಿ ಮುಂಬೈ ನಾಯಕ ರೋಹಿತ್ ಶರ್ಮಾ ಮೇಲೆ ₹24 ಲಕ್ಷ ದಂಡ ವಿಧಿಸಲಾಗಿದೆ. ಪ್ಲೇಯಿಂಗ್ ಇಲೆವೆನ್‌ನ ಉಳಿದ ಆಟಗಾರರ ಮೇಲೆ ತಲಾ ₹6 ಲಕ್ಷ (ಪಂದ್ಯ ಶುಲ್ಕದ ಶೇ 25) ದಂಡ ಹೇರಲಾಗಿದೆ. ಇದನ್ನೂ ಓದಿ: 2022: 4,6,6,6,6 - ಒಂದೇ ಓವರ್‌ನಲ್ಲಿ 29 ರನ್ ಸಿಡಿಸಿದ 'ಬೇಬಿ ಎಬಿಡಿ' ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ಮುಂಬೈ ವಿರುದ್ಧ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ 12 ರನ್ ಅಂತರದ ಗೆಲುವು ದಾಖಲಿಸಿತ್ತು. ಒಟ್ಟಿನಲ್ಲಿ ಮುಂಬೈಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಪ್ರಸಕ್ತ ಸಾಲಿನಲ್ಲಿ ಐಪಿಎಲ್ ನಿಯಾಮವಳಿ ಅನ್ವಯ ನಿಧಾನಗತಿಯ ಬೌಲಿಂಗ್‌ಗಾಗಿ ರೋಹಿತ್ ಶರ್ಮಾ ಎರಡನೇ ಬಾರಿ ದಂಡನೆಗೊಳಗಾಗಿದ್ದಾರೆ. ಈ ಮೊದಲು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ₹12 ಲಕ್ಷ ದಂಡಕ್ಕೆ ಗುರಿಯಾಗಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.