2022: ಐಪಿಎಲ್‌ನಲ್ಲಿ ರಶೀದ್ ಖಾನ್ 100 ವಿಕೆಟ್ ಸಾಧನೆ ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಶೀದ್ ಖಾನ್ 100 ವಿಕೆಟ್ ಸಾಧನೆ ಮಾಡಿದ್ದಾರೆ. ಈ ಮೂಲಕ ಐಪಿಎಲ್‌ನಲ್ಲಿ 100 ವಿಕೆಟ್ ಗಳಿಸಿದ ವಿದೇಶದ ಎರಡನೇ ಸ್ಪಿನ್ನರ್ ಹಾಗೂ ಒಟ್ಟಾರೆಯಾಗಿ 16ನೇ ಬೌಲರ್ ಎನಿಸಿದ್ದಾರೆ. ಇದನ್ನೂ ಓದಿ:ಸದ್ಯ ಟೀಮ್ ಇಂಡಿಯಾ ಬಗ್ಗೆ ಯೋಚಿಸುತ್ತಿಲ್ಲ, ಐಪಿಎಲ್ ಮೇಲೆ ಗಮನ: ಹಾರ್ದಿಕ್ ಈ ಪಟ್ಟಿಯಲ್ಲಿ ವೆಸ್ಟ್‌ಇಂಡೀಸ್‌ನ ಸ್ಪಿನ್ನರ್ ಸುನಿಲ್ ನಾರಾಯಣ್ ಬಳಿಕ ರಶೀದ್ ಕಾಣಿಸಿಕೊಂಡಿದ್ದಾರೆ. 83ನೇ ಐಪಿಎಲ್ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. ಐಪಿಎಲ್ 2022ರಲ್ಲಿ ನೂತನ ಗುಜರಾತ್ ಟೈಟನ್ಸ್ ತಂಡದ ಪರ ಆಡುತ್ತಿರುವ ರಶೀದ್, ಶನಿವಾರ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಸ್ಮರಣೀಯ ಸಾಧನೆ ಮಾಡಿದರು. 💯 ! 😎 , ! ✨# # # ../ ಐಪಿಎಲ್‌ನಲ್ಲಿ 100 ವಿಕೆಟ್ ಸಾಧಕರು: 1. ಡ್ವೇನ್ ಬ್ರಾವೊ: 179 2. ಲಸಿತ್ ಮಾಲಿಂಗ: 170 3. ಅಮಿತ್ ಮಿಶ್ರಾ: 166 4. ಪಿಯೂಷ್ ಚಾವ್ಲಾ: 157 5. ಯಜುವೇಂದ್ರ ಚಾಹಲ್: 157 6. ಭುವನೇಶ್ವರ್ ಕುಮಾರ್: 151 7. ಹರಭಜನ್ ಸಿಂಗ್: 150 8. ಆರ್. ಅಶ್ವಿನ್: 149 9. ಸುನಿಲ್ ನಾರಾಯಣ್: 149 10. ಜಸ್‌ಪ್ರೀತ್ ಬೂಮ್ರಾ: 134 11. ರವೀಂದ್ರ ಜಡೇಜ: 132 12. ಉಮೇಶ್ ಯಾದವ್: 130 13. ಸಂದೀಪ್ ಶರ್ಮಾ: 112 14. ವಿನಯ್ ಕುಮಾರ್: 105 15. ಜಹೀರ್ ಖಾನ್: 102 16. ರಶೀದ್ ಖಾನ್: 101 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.