2022: ಜೆರ್ಸಿಯಲ್ಲಿ ಧೋನಿ ಹಸ್ತಾಕ್ಷರ ಪಡೆದು ಅಭಿಮಾನಿಗಳ ಹೃದಯ ಗೆದ್ದ ಸ್ಟೇನ್ ಪುಣೆ: ಸ್ವತಃ ದಿಗ್ಗಜ ಆಟಗಾರನಾಗಿರುವ ದಕ್ಷಿಣ ಆಫ್ರಿಕಾದ ಮಾಜಿ ವೇಗದ ಬೌಲರ್ ಡೇಲ್ ಸ್ಟೇನ್ ಅವರು ತಮ್ಮ ಜೆರ್ಸಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಹಸ್ತಾಕ್ಷರ ಪಡೆಯುವ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಐಪಿಎಲ್ 2022 ಟೂರ್ನಿಯಲ್ಲಿ ಭಾನುವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು 13 ರನ್ ಅಂತರದ ರೋಚಕ ಗೆಲುವು ದಾಖಲಿಸಿತ್ತು. ಇದನ್ನೂ ಓದಿ: 2022: ನಾಯಕ ಪಟ್ಟಕ್ಕೆ ಮರಳಿದ ಮೊದಲ ಪಂದ್ಯದಲ್ಲಿ ತಾಳ್ಮೆ ಕಳೆದುಕೊಂಡ ಧೋನಿ ಪಂದ್ಯದ ಬಳಿಕ ಸನ್‌ರೈಸರ್ಸ್ ಹೈದರಾಬಾದ್ ತಂಡದ ಯುವ ಆಟಗಾರರಿಗೆ ಧೋನಿ ಅಮೂಲ್ಯ ಸಲಹೆಗಳನ್ನು ನೀಡಿದರು. ' - . ../ ಈ ಸಂದರ್ಭದಲ್ಲಿ ಎಸ್‌ಆರ್‌ಎಚ್ ವೇಗದ ಬೌಲಿಂಗ್ ಕೋಚ್ ಆಗಿರುವ ಸ್ಟೇನ್, ಮಹಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಅಲ್ಲದೆ ಜೆರ್ಸಿಯಲ್ಲಿ ಧೋನಿ ಅವರ ಹಸ್ತಾಕ್ಷರ ಪಡೆದರು. ಪ್ರಸ್ತುತ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಚೆನ್ನೈ ತಂಡದ ನಾಯಕ ಸ್ಥಾನಕ್ಕೆ ರವೀಂದ್ರ ಜಡೇಜ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಮಹೇಂದ್ರ ಸಿಂಗ್ ಧೋನಿ ಮತ್ತೆ ನಾಯಕನ ಪಟ್ಟಕ್ಕೇರಿದ್ದಾರೆ. ಅಲ್ಲದೆ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ತಂಡವನ್ನು ಗೆಲುವಿನತ್ತ ಮುನ್ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ. ' . 💛🧡# # # # ../YG4F2vnPQc ../wrg2AHZMGh ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.