ಮಹಿಳಾ ಟಿ20: ಫೈನಲ್‌ಗೆ ಮಹಾರಾಷ್ಟ್ರ ಸೂರತ್‌: ಯಷ್ಟಿಕಾ ಭಾಟಿಯಾ ಗಳಿಸಿದ ಅರ್ಧಶತಕ (71) ವ್ಯರ್ಥವಾಯಿತು. ಬರೋಡಾ ತಂಡವನ್ನು ಆರು ವಿಕೆಟ್‌ಗಳಿಂದ ಮಣಿಸಿದ ಮಹಾರಾಷ್ಟ್ರ ತಂಡ ರಾಷ್ಟ್ರೀಯಸೀನಿಯರ್ ಮಹಿಳಾ ‌ಟ್ವೆಂಟಿ–20 ಟೂರ್ನಿಯ ಫೈನಲ್‌ಗೆ ಲಗ್ಗೆಯಿಟ್ಟಿತು. ಸೋಮವಾರ ಇಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬರೋಡಾ ತಂಡವು ಏಳು ವಿಕೆಟ್‌ಗೆ 121 ರನ್‌ಗಳಿಗೆ ಎಲ್ಲ ವಿಕೆಟ್‌ ಒಪ್ಪಿಸಿತು. ಸ್ಮೃತಿ ಮಂದಾನ ನಾಯಕತ್ವದ ಮಹಾರಾಷ್ಟ್ರಪರ ಉತ್ಕರ್ಷಾ ಪವಾರ್‌ (21ಕ್ಕೆ 3) ಬೌಲಿಂಗ್‌ನಲ್ಲಿ ಪರಿಣಾಮಕಾರಿ ಎನಿಸಿದರು. ಬರೋಡಾ ಪರ ಯಷ್ಟಿಕಾ 45 ಎಸೆತಗಳಲ್ಲಿ 10 ಬೌಂಡರಿ ಒಂದು ಸಿಕ್ಸರ್ ಸಿಡಿಸಿದರು. ಗುರಿ ಬೆನ್ನತ್ತಿದ ಮಹಾರಾಷ್ಟ್ರ ಶಿವಾಲಿ ಶಿಂಧೆ (44) ಮತ್ತು ತೇಜಲ್ ಹಸನ್‌ಬಿಸ್‌ (33) ಬ್ಯಾಟಿಂಗ್ ಬಲದಿಂದ ಐದು ಎಸೆತಗಳು ಬಾಕಿ ಇರುವಂತೆಯೇ ಗುರಿ ತಲುಪಿತು. ಕೇವಲ ನಾಲ್ಕು ವಿಕೆಟ್‌ ಕಳೆದುಕೊಂಡಿತು. ಸಂಕ್ಷಿಪ್ತ ಸ್ಕೋರು: ಬರೋಡಾ: 20 ಓವರ್‌ಗಳಲ್ಲಿ 7ಕ್ಕೆ 121 (ಯಷ್ಟಿಕಾ ಭಾಟಿಯಾ 71, ಜೆ. ಮೋಹಿತೆ 22; ಉತ್ಕರ್ಷಾ ಪವಾರ್‌ 21ಕ್ಕೆ 3, ಎಂ.ಆರ್‌. ಮಾಗ್ರೆ 32ಕ್ಕೆ 2; ಮಹಾರಾಷ್ಟ್ರ: 19.1 ಓವರ್‌ಗಳಲ್ಲಿ 4ಕ್ಕೆ 125 (ಸ್ಮೃತಿ ಮಂದಾನ 13, ಶಿವಾಲಿ ಶಿಂಧೆ 44, ತೇಜಲ್‌ ಹಸನ್‌ಬಿಸ್‌ 33; ಎನ್‌. ವೈ ಪಟೇಲ್‌ 23ಕ್ಕೆ 1, ಜೆ. ಮೋಹಿತೆ 12ಕ್ಕೆ 1). ಫಲಿತಾಂಶ: ಮಹಾರಾಷ್ಟ್ರ ತಂಡಕ್ಕೆ ಆರು ವಿಕೆಟ್‌ಗಳ ಜಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.