2022: ರಾಯಲ್ಸ್ ತಂಡಕ್ಕೆ ಮರಳಿದ ಹೆಟ್ಮೆಯರ್ ಮುಂಬೈ: ರಾಜಸ್ಥಾನ್ ರಾಯಲ್ಸ್ ಬ್ಯಾಟರ್ ಶಿಮ್ರಾನ್ ಹೆಟ್ಮೆಯರ್ ಮತ್ತೆ ತಂಡಕ್ಕೆ ಮರಳಿದ್ದಾರೆ. ಇದರಿಂದಾಗಿ ಪ್ರಸಕ್ತ ಸಾಲಿನ ಐಪಿಎಲ್‌ನಲ್ಲಿ ರಾಜಸ್ಥಾನ್ ತಂಡವು ಮತ್ತಷ್ಟು ಬಲಿಷ್ಠವೆನಿಸಿದೆ. ಹೆಟ್ಮೆಯರ್ ಪತ್ನಿ ಮೊದಲ ಮಗುವಿಗೆ ಜನ್ಮ ನೀಡಿದ್ದಾರೆ. ಈ ಸುಸಂದರ್ಭದಲ್ಲಿ ಭಾಗಿಯಾಗಲು ಹೆಟ್ಮೆಯರ್ ಗಯಾನಾಗೆ ತೆರಳಿದ್ದರು. ಇದನ್ನೂ ಓದಿ: 2022: ಕೊಹ್ಲಿ, ರೋಹಿತ್ ಕಳಪೆ ಬ್ಯಾಟಿಂಗ್ ಬಗ್ಗೆ ಚಿಂತೆಯಿಲ್ಲ: ಗಂಗೂಲಿ ಇದರಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಿದ್ದರು. ಶುಕ್ರವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆಯಲಿರುವ ಲೀಗ್ ಹಂತದ ಕೊನೆಯ ಪಂದ್ಯಕ್ಕೆ ಹೆಟ್ಮೆಯರ್ ಲಭ್ಯರಾಗುವ ಸಾಧ್ಯತೆಯಿದೆ. ತಂಡಕ್ಕೆ ಮರಳಿರುವ ಹೆಟ್ಮೆಯರ್ ಈಗ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ಐಪಿಎಲ್ ಮೂಲಗಳು ತಿಳಿಸಿವೆ. ಭಾನುವಾರ ಲಖನೌ ಸೂಪರ್ ಜೈಂಟ್ಸ್ ವಿರುದ್ಧ 24 ರನ್ ಅಂತರದ ಗೆಲುವು ದಾಖಲಿಸಿರುವ ರಾಜಸ್ಥಾನ್, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. 25 ವರ್ಷದ ಹೆಟ್ಮೆಯರ್ ಅವರನ್ನು ಐಪಿಎಲ್ ಮೆಗಾ ಹರಾಜಿನಲ್ಲಿ ₹8.5 ಕೋಟಿ ನೀಡಿ ರಾಜಸ್ಥಾನ್ ತಂಡವು ಖರೀದಿಸಿತ್ತು. ಹೆಟ್ಮೆಯರ್ 11 ಪಂದ್ಯಗಳಲ್ಲಿ 72.75ರ ಸರಾಸರಿಯಲ್ಲಿ 291 ರನ್ ಗಳಿಸಿದ್ದು, 166.29ರ ಸ್ಟ್ರೈಕ್‌ರೇಟ್ ಕಾಪಾಡಿಕೊಂಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.