ಮುಂಬೈಗೆ ಉತ್ತರ ಪ್ರದೇಶ ಸವಾಲು ಬೆಂಗಳೂರು: 41 ಬಾರಿಯ ಚಾಂಪಿಯನ್ ಮುಂಬೈ ತಂಡವು ರಣಜಿ ಟ್ರೋಫಿ ಟೂರ್ನಿಯ ಸೆಮಿಫೈನಲ್‌ನಲ್ಲಿ ಮಂಗಳವಾರ ಇಲ್ಲಿ ಉತ್ತರ ಪ್ರದೇಶ ತಂಡಕ್ಕೆ ಮುಖಾಮುಖಿಯಾಗಲಿದೆ. ಉತ್ತಮ ಲಯದಲ್ಲಿರುವ ಪೃಥ್ವಿ ಶಾ ನಾಯಕತ್ವದ ಮುಂಬೈ ತಂಡದ ಬ್ಯಾಟರ್‌ಗಳು, ಉತ್ತರ ಪ್ರದೇಶ ಬೌಲರ್‌ಗಳಿಗೆ ಸವಾಲಾಗಲಿದ್ದಾರೆ. ಮುಂಬೈ ತಂಡವು ಎಂಟರಘಟ್ಟದಲ್ಲಿ ವಿಶ್ವದಾಖಲೆಯ 725 ರನ್‌ಗಳ ಅಂತರದಿಂದ ಉತ್ತರಾಖಂಡ ತಂಡವನ್ನು ಮಣಿಸಿತ್ತು. ಉತ್ತರ ಪ್ರದೇಶ ತಂಡವು ಕರ್ನಾಟಕಕ್ಕೆ ಐದು ವಿಕೆಟ್‌ಗಳಿಂದ ಸೋಲುಣಿಸಿತ್ತು. ಮುಂಬೈಗೆ ಸುವೇದ್‌ ಪಾರ್ಕರ್ ಮತ್ತು ಪೃಥ್ವಿ ಶಾ ಬ್ಯಾಟಿಂಗ್‌ನ ಬಲವಾಗಿದ್ದಾರೆ. ನಾಲ್ಕರ ಘಟ್ಟದ ಇನ್ನೊಂದು ಪಂದ್ಯದಲ್ಲಿ ಬಂಗಾಳ ತಂಡವು ಮಧ್ಯಪ್ರದೇಶವನ್ನು ಎದುರಿಸಲಿದೆ. ಸೆಮಿಫೈನಲ್ ಪಂದ್ಯಗಳು ಮುಂಬೈ– ಉತ್ತರಪ್ರದೇಶ ಸ್ಥಳ: ಜಸ್ಟ್ ಕ್ರಿಕೆಟ್‌ ಮೈದಾನ, ಬೆಂಗಳೂರು ಬಂಗಾಳ– ಮಧ್ಯಪ್ರದೇಶ ಸ್ಥಳ: ಕೆಎಸ್‌ಸಿಎ ಕ್ರೀಡಾಂಗಣ ಆಲೂರು (3), ಬೆಂಗಳೂರು ಪಂದ್ಯಗಳ ಆರಂಭ: ಬೆಳಿಗ್ಗೆ 9.30 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.