T20I: ಟಿ20 ಕಣಕ್ಕೆ ಮರಳಿದ ವಿರಾಟ್ ಕೊಹ್ಲಿ ಬರ್ಮಿಂಗ್‌ಹ್ಯಾಮ್: ಐದು ತಿಂಗಳುಗಳಿಂದ ಅಂತರರಾಷ್ಟ್ರೀಯ ಟಿ20 ಪಂದ್ಯಗಳಿಂದ ದೂರವೇ ಉಳಿದಿರುವ ವಿರಾಟ್ ಕೊಹ್ಲಿ ಶನಿವಾರ ಎಜ್‌ಬಾಸ್ಟನ್‌ ಅಂಗಳದಲ್ಲಿ ಇಂಗ್ಲೆಂಡ್ ಎದುರಿನ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಗುರುವಾರ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ಅವರು ಆಡಿರಲಿಲ್ಲ. ಕಳೆದ ಐದು ತಿಂಗಳುಗಳ ಅವಧಿಯಲ್ಲಿ ಐಪಿಎಲ್ ಬಿಟ್ಟರೆ ಬೇರೆ ಯಾವುದೇ ಟಿ20 ಪಂದ್ಯಗಳಲ್ಲಿ ಆಡಿಲ್ಲ. ಫೆಬ್ರುವರಿಯಲ್ಲಿ ಎರಡು ಅಂತರರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಆಡಿದ್ದರು. , 1st T20| ಇಂಗ್ಲೆಂಡ್‌ ವಿರುದ್ಧ ಭಾರತಕ್ಕೆ 50 ರನ್‌ಗಳ ಜಯ ತಂಡದ ವಿಶ್ರಾಂತಿ ನೀತಿಯಿಂದಾಗಿ ಅನುಭವಿ ಆಟಗಾರರು ಹೆಚ್ಚು ರಜೆಗಳನ್ನು ಪಡೆಯುತ್ತಿದ್ದಾರೆ. ಇದರಿಂದಾಗಿ ಯುವ ಆಟಗಾರರಿಗೆ ಅವಕಾಶಗಳು ಸಿಗುತ್ತಿವೆ. ಆದರೆ ಈಗ ವಿರಾಟ್‌ ಮರಳಿದರೆ ದೀಪಕ್ ಹೂಡಾ ವಿಶ್ರಾಂತಿ ಪಡೆಯಬೇಕಾಗಬಹುದು. ಹೂಡಾ ಉತ್ತಮ ಲಯದಲ್ಲಿದ್ದಾರೆ. ಆದ್ದರಿಂದ ಅವರನ್ನು ಉಳಿಸಿಕೊಂಡರೆ, ಕೊಹ್ಲಿ ಮತ್ತು ಇಶಶಾನ್ ಕಿಶನ್ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಆಗ ಋತುರಾಜ್ ವಿಶ್ರಾಂತಿ ಪಡೆಯಬಹುದು. ಮೊದಲ ಪಂದ್ಯದಲ್ಲಿ ಗೆದ್ದಿರುವ ಭಾರತ ತಂಡವು ಈ ಪಂದ್ಯ ಜಯಿಸಿ ಸರಣಿ ಕೈವಶ ಮಾಡಿಕೊಳ್ಳುವ ಹುಮ್ಮಸ್ಸಿನಲ್ಲಿದೆ. ಪಂದ್ಯ ಆರಂಭ: ರಾತ್ರಿ 7. ನೇರಪ್ರಸಾರ:ಸೋನಿ ಲಿವ್‌ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.