ದುಲೀಪ್ ಟ್ರೋಫಿ: ಪಶ್ಚಿಮ ವಲಯಕ್ಕೆ ರಹಾನೆ ನಾಯಕ ನವದೆಹಲಿ (ಪಿಟಿಐ):‌ ಫಿಟ್‌ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಭಾರತ ತಂಡದ ಆಟಗಾರ ಅಜಿಂಕ್ಯ ರಹಾನೆ ಮುಂದಿನ ತಿಂಗಳು ನಡೆಯಲಿರುವ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಪಶ್ಚಿಮ ವಲಯ ತಂಡವನ್ನು ಮುನ್ನಡೆಸಲಿದ್ದಾರೆ. ಕಳೆದ ಬಾರಿ ರಣಜಿ ಟ್ರೋಫಿ ಟೂರ್ನಿಯ ಫೈನಲ್‌ನಲ್ಲಿ ಆಡಿದ್ದ ಮುಂಬೈ ತಂಡದ ಪೃಥ್ವಿ ಶಾ, ಶಾರ್ದೂಲ್ ಠಾಕೂರ್, ಯಶಸ್ವಿ ಜೈಸ್ವಾಲ್ ಸೇರಿದಂತೆ ಆರು ಮಂದಿ ಸ್ಥಾನ ಪಡೆದಿದ್ದಾರೆ. ಇದೇ ಸಂದರ್ಭದಲ್ಲಿ ಕೇಂದ್ರ ವಲಯ ತಂಡವನ್ನೂ ಪ್ರಕಟಿಸಲಾಗಿದ್ದು, ಕರಣ್ ಶರ್ಮಾ ನಾಯಕರಾಗಿದ್ಧಾರೆ. ಸೆಪ್ಟೆಂಬರ್ 8ರಿಂದ 25ರವರೆಗೆ ತಮಿಳುನಾಡಿನಲ್ಲಿ ಟೂರ್ನಿ ನಡೆಯಲಿದೆ. ಪಶ್ಚಿಮ ವಲಯ: ಅಜಿಂಕ್ಯ ರಹಾನೆ (ನಾಯಕ), ಪೃಥ್ವಿ ಶಾ, ಯಶಸ್ವಿ ಜೈಸ್ವಾಲ್ , ಶಮ್ಸ್ ಮಲಾನಿ, ತನುಷ್ ಕೋಟ್ಯಾನ್, ಶಾರ್ದೂಲ್ ಠಾಕೂರ್ (ಮುಂಬೈ), ರಾಹುಲ್ ತ್ರಿಪಾಠಿ, ಸತ್ಯಜೀತ್ ಬಚಾವ್ (ಮಹಾರಾಷ್ಟ್ರ), ಹಿತ್ ಪಟೇಲ್, ಚಿಂತನ್ ಗಾಜಾ (ಗುಜರಾತ್), ಜಯದೇವ್ ಉನದ್ಕತ್, ಚಿರಾಗ್ ಜಾನಿ (ಸೌರಾಷ್ಟ್ರ), ಅತಿತ್ ಶೇಥ್ (ಬರೋಡ) ಕೇಂದ್ರ ವಲಯ: ಕರಣ್ ಶರ್ಮಾ (ನಾಯಕ), ಶುಭಂ ಶರ್ಮಾ (ಉಪನಾಯಕ), ಹಿಮಾಂಶು ಮಂತ್ರಿ (ವಿಕೆಟ್‌ಕೀಪರ್), ಯಶ್ ದುಬೆ, ಪ್ರಿಯಂ ಗರ್ಗ್, ರಿಂಕು ಸಿಂಗ್, ಅಶೋಕ ಮನೇರಿಯಾ, ಅಕ್ಷಯ್ ವಾಡಕರ್, ಗೌರವ್ ಯಾದವ್, ವೆಂಕಟೇಶ್ ಅಯ್ಯರ್, ದೀಪಕ್ ಧೊಪೊಲಾ, ಅನಿಕೇತ್ ಚೌಧರಿ, ಕುಮಾರ್ ಕಾರ್ತಿಕೇಯ, ಆದಿತ್ಯ ಸರವಟೆ, ಅಂಕಿತ್ ರಜಪೂತ್. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.