ಮನೀಷ್ ಪಾಂಡೆ–ಕರುಣ್ ನಾಯರ್ ಮುಖಾಮುಖಿ ಬೆಂಗಳೂರು: ಕರ್ನಾಟಕ ರಣಜಿ ಕ್ರಿಕೆಟ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾದ ಮನೀಷ್ ಪಾಂಡೆ ಹಾಗೂ ಕರುಣ್ ನಾಯರ್ ಗುರುವಾರ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಟೂರ್ನಿ ಎರಡನೇ ಕ್ವಾಲಿಫೈಯರ್‌ನಲ್ಲಿ ಮುಖಾಮುಖಿಯಾಗಲಿದ್ದಾರೆ. ಮನೀಷ್ ನಾಯಕತ್ವದ ಗುಲ್ಬರ್ಗ್ ಮಿಸ್ಟಿಕ್ಸ್ ಹಾಗೂ ಕರುಣ್ ನೇತೃತ್ವದ ಮೈಸೂರು ವಾರಿಯರ್ಸ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೆಣಸಲಿವೆ. ಈ ಪಂದ್ಯದಲ್ಲಿ ಜಯಿಸಿದವರು ಫೈನಲ್‌ನಲ್ಲಿ ಮಯಂಕ್ ಅಗರವಾಲ್ ನಾಯಕತ್ವದ ಬೆಂಗಳೂರು ವಾರಿಯರ್ಸ್‌ ತಂಡವನ್ನು ಎದುರಿಸುವರು. ಗುಲ್ಬರ್ಗ ತಂಡವು ಮೊದಲ ಕ್ವಾಲಿಫೈಯರ್‌ನಲ್ಲಿ ಬೆಂಗಳೂರು ಎದುರು ಸೋತಿತ್ತು. ರೋಹನ್ ಪಾಟೀಲ ಗಳಿಸಿದ್ದ ಸುಂದರ ಶತಕ ವ್ಯರ್ಥವಾಗಿತ್ತು. ಯುವ ಬೌಲರ್‌ಗಳೂ ವೈಫಲ್ಯ ಅನುಭವಿಸಿದ್ದರಿಂದ ಬೆಂಗಳೂರು 227 ರನ್‌ ಗಳಿಸಿ ಬೃಹತ್ ಗುರಿಯೊಡ್ಡಿತ್ತು. ಮೈಸೂರು ಎಲಿಮಿನೇಟರ್‌ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ಎದುರು ಜಯಿಸಿತ್ತು. ತಂಡದ ಆಲ್‌ರೌಂಡರ್ ಶ್ರೇಯಸ್ ಗೋಪಾಲ್ ಹಾಗೂ ಬ್ಯಾಟರ್ ನಿಹಾಲ್ ಉಲ್ಲಾಳ ಮಿಂಚಿದ್ದರು. ತಂಡಗಳು ಗುಲ್ಬರ್ಗ ಮಿಸ್ಟಿಕ್ಸ್: ಮನೀಷ್ ಪಾಂಡೆ (ನಾಯಕ), ರೋಹನ್ ಪಾಟೀಲ, ಜಸ್ವಂತ್ ಆಚಾರ್ಯ, ಕೃಷನ್ ಶ್ರೀಜಿತ್ (ವಿಕೆಟ್‌ಕೀಪರ್), ಮನೋಜ್ ಬಾಂಡಗೆ, ಅಜಯ್ ಗೌಡ, ರಿತೇಶ್ ಭಟ್ಕಳ್, ಕುಶಾಲ್ ವಾಧ್ವಾನಿ, ಪ್ರಣವ್ ಭಾಟಿಯಾ, ವಿದ್ವತ್ ಕಾವೇರಪ್ಪ, ಧನುಷ್ ಗೌಡ ಮೈಸೂರು ವಾರಿಯರ್ಸ್: ಕರುಣ್ ನಾಯರ್ (ನಾಯಕ), ನಿಹಾಲ್ ಉಲ್ಲಾಳ, ಪವನ್ ದೇಶಪಾಂಡೆ, ಎಸ್. ಶಿವರಾಜ್, ನಾಗಭರತ್, ಶುಭಾಂಗ್ ಹೆಗಡೆ, ಶ್ರೇಯಸ್ ಗೋಪಾಲ್, ಭರತ್ ಧುರಿ, ವಿದ್ಯಾಧರ್ ಪಾಟೀಲ, ಆದಿತ್ಯ ಗೋಯಲ್, ಪ್ರತೀಕ್ ಜೈನ್, ನಿತಿನ್ ಭಿಲ್ಲೆ. ಪಂದ್ಯ ಆರಂಭ: ರಾತ್ರಿ 7 ನೇರಪ್ರಸಾರ; ಸ್ಟಾರ್ ಸ್ಪೋರ್ಟ್ಸ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.