2021: ನಟರಾಜನ್‌‌ಗೆ ಕೋವಿಡ್; ಬದಲಿ ಆಟಗಾರನನ್ನು ಘೋಷಿಸಿದ ಹೈದರಾಬಾದ್ ದುಬೈ: ಎಡಗೈ ವೇಗದ ಬೌಲರ್ ತಂಗರಸು ನಟರಾಜನ್ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಅಲ್ಪಾವಧಿಗೆ ಬದಲಿ ಆಟಗಾರನನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡವು ಘೋಷಿಸಿದೆ. ಯುಎಇನಲ್ಲಿ ನಡೆಯುತ್ತಿರುವ ಐಪಿಎಲ್ ಎರಡನೇ ಹಂತದಲ್ಲಿ ಸೆಪ್ಟೆಂಬರ್ 22ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ನಟರಾಜನ್ ಅವರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಗೊಂಡಿತ್ತು. ಇದನ್ನೂ ಓದಿ:ನಾನು ದಾದಾ ಅಭಿಮಾನಿ, ಅವರ ಶೈಲಿಯನ್ನೇ ಅನುಕರಿಸಲು ಬಯಸುತ್ತೇನೆ: ವೆಂಕಟೇಶ ಅಯ್ಯರ್ ಈಗ ನಟರಾಜನ್ ಗುಣಮುಖರಾಗಿ ತಂಡವನ್ನು ಮರು ಸೇರ್ಪಡೆಯಾಗುವ ವರೆಗೆ ಜಮ್ಮು ಕಾಶ್ಮೀರದ ಮಧ್ಯಮ ಗತಿಯ ವೇಗದ ಬೌಲರ್ ಉಮ್ರಾನ್ ಮಲಿಕ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ. : , & , # , - . # # #IPL2021 ../0erUIJLPgg ನಟರಾಜನ್ ಸಂಪೂರ್ಣವಾಗಿ ಗುಣಮುಖರಾದ ಬಳಿಕ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಐಪಿಎಲ್ ಆಯೋಜಕರು ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ. ಜಮ್ಮು ಕಾಶ್ಮೀರ ಪರ ಟಿ20 ಹಾಗೂ ಲಿಸ್ಟ್ 'ಎ' ಕ್ರಿಕೆಟ್ ಆಡಿರುವ ಉಮ್ರಾನ್ ಮಲಿಕ್ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅವರು ಈಗಾಗಲೇ ನೆಟ್ ಬೌಲರ್ ಆಗಿ ಸನ್‌ರೈಸರ್ಸ್ ಕ್ಯಾಂಪ್‌ನಲ್ಲಿ ಗುರುತಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.