2021: ಮ್ಯಾಕ್ಸ್‌‍ವೆಲ್ ಸ್ವಿಚ್-ಹಿಟ್ ಇಂಟರ್‌ನೆಟ್‌ನಲ್ಲಿ ಸೂಪರ್ ಹಿಟ್! ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ 'ಸ್ವಿಚ್-ಹಿಟ್' ಮೂಲಕ ಎದುರಾಳಿ ಮುಂಬೈ ಇಂಡಿಯನ್ಸ್ ತಂಡವನ್ನು ನಿದ್ದೆಗೆಡಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ವಿಶಿಷ್ಟ ಶೈಲಿಯ ಆಟವು ಇಂಟರ್‌ನೆಟ್‌ನಲ್ಲೂ 'ಸೂಪರ್ ಹಿಟ್' ಆಗಿದೆ. ಮ್ಯಾಕ್ಸ್‌ವೆಲ್, ಕ್ರೀಸಿನಲ್ಲಿ ಅತ್ತಿತ್ತ ಚಲಿಸುತ್ತಾ ಸ್ವಿಚ್-ಹಿಟ್ ಮೂಲಕ ಮುಂಬೈ ಬೌಲರ್‌ಗಳನ್ನು ಪೇಚಿಗೆ ಸಿಲುಕಿಸಿದರು. ಪರಿಣಾಮ ಎದುರಾಳಿಗಳ ಬಳಿ ಉತ್ತರವೇ ಇರಲಿಲ್ಲ. ಇದನ್ನೂ ಓದಿ:ಕೊಹ್ಲಿ-ರೋಹಿತ್ ನಡುವೆ ಭಿನ್ನಾಭಿಪ್ರಾಯವಿದೆ ಎಂದವರಿಗೆ ಇಲ್ಲಿದೆ ಉತ್ತರ! ಮ್ಯಾಕ್ಸ್‌ವೆಲ್ ಅಮೋಘ ಆಟವನ್ನು ಅಭಿಮಾನಿಗಳು ಕೊಂಡಾಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ಕುರಿತು ಉಲ್ಲೇಖ ಮಾಡಿದ್ದಾರೆ. # ../Q6Ol1WLom4 ಕೇವಲ 37 ಎಸೆತಗಳನ್ನು ಎದುರಿಸಿದ ಮ್ಯಾಕ್ಸ್‌ವೆಲ್, ಆರು ಬೌಂಡರಿ ಹಾಗೂ ಮೂರು ಭರ್ಜರಿ ಸಿಕ್ಸರ್‌ಗಳ ಮೂಲಕ 56 ರನ್ ಗಳಿಸಿದರು.ಈ ಮೂಲಕ ಆರ್‌ಸಿಬಿ ಆರು ವಿಕೆಟ್ ನಷ್ಟಕ್ಕೆ 165 ರನ್ ಗಳಿಸುವಲ್ಲಿ ಯಶಸ್ವಿಯಾಗಿತ್ತು. ಬಳಿಕ ಬೌಲಿಂಗ್‌ನಲ್ಲೂ ಮಿಂಚಿದ ಮ್ಯಾಕ್ಸ್‌ವೆಲ್ ಎರಡು ಪ್ರಮುಖ ವಿಕೆಟ್‌ಗಳನ್ನು ಕಬಳಿಸುವ ಮೂಲಕ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಇದೇ ಪಂದ್ಯದಲ್ಲಿ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‌ ಮಾದರಿಯಲ್ಲಿ 10,000 ರನ್ ಮೈಲಿಗಲ್ಲು ಕ್ರಮಿಸಿದ್ದಾರೆ. ಅತ್ತ ಹರ್ಷಲ್ ಪಟೇಲ್ 'ಹ್ಯಾಟ್ರಿಕ್' ವಿಕೆಟ್ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಮುಂಬೈ ವಿರುದ್ಧ 54 ರನ್ ಅಂತರದ ಗೆಲುವು ದಾಖಲಿಸಿದೆ. # ../ . ../2e3s05S0zO ' : ../l8WwBy3S8S # : ../l9tq7Bkrn0 :# # # ../wV5ZrRaaNQ ../19SAww1ncn ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.