ಆಸ್ಟ್ರೇಲಿಯಾ ನೆಲದಲ್ಲಿ ಶತಕ ಬಾರಿಸಿ ಇತಿಹಾಸ ರಚಿಸಿದ ಸ್ಮೃತಿ ಮಂದಾನ ಗೋಲ್ಡ್‌ ಕೋಸ್ಟ್‌: ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಶತಕ ಗಳಿಸಿರುವ ಭಾರತದ ಆಟಗಾರ್ತಿ ಸ್ಮೃತಿ ಮಂದಾನ ನೂತನ ದಾಖಲೆ ಬರೆದಿದ್ದಾರೆ. ಆಸ್ಟ್ರೇಲಿಯಾ ನೆಲದಲ್ಲಿ ಮಹಿಳಾ ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಭಾರತದ ಮೊಟ್ಟ ಮೊದಲಬ್ಯಾಟರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಇದನ್ನೂ ಓದಿ: 2021 | ಐಪಿಎಲ್ ತೊರೆದ ಕ್ರಿಸ್ ಗೇಲ್ ಕೊಟ್ಟ ಕಾರಣ ಏನು? ಇದು ಕ್ರಿಕೆಟ್‌ನ ದೀರ್ಘ ಮಾದರಿಯಲ್ಲಿ ಮಂದಾನ ಬ್ಯಾಟ್‌ನಿಂದ ದಾಖಲಾದ ಚೊಚ್ಚಲ ಶತಕವೂ ಹೌದು. ✅ # ' ✅ 👇 & @mandhana_smriti' . # 👉 ://./seh1NVa8gu ../aL6wu59WLl ಮಳೆ ಅಡ್ಡಿಯಾದ ಪಂದ್ಯದಲ್ಲಿ ತಾಜಾ ವರದಿಗಳ ವೇಳೆಗೆ ಭಾರತ ಎರಡನೇ ದಿನದಾಟದಲ್ಲಿ 101.5 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 276 ರನ್ ಗಳಿಸಿದೆ. ಆಕರ್ಷಕ ಇನ್ನಿಂಗ್ಸ್ ಕಟ್ಟಿದ ಸ್ಮೃತಿ 216 ಎಸೆತಗಳಲ್ಲಿ 127 ರನ್ ಗಳಿಸಿದರು. ಅವರ ಈ ಇನ್ನಿಂಗ್ಸ್‌ನಲ್ಲಿ 22 ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದ್ದವು. ಅಲ್ಲದೆ ಮೊದಲ ವಿಕೆಟ್‌ಗೆ ಶಫಾಲಿ ವರ್ಮಾ ಜೊತೆಗೆ 93 ರನ್‌ಗಳ ಜೊತೆಯಾಟ ನೀಡಿದರು. ಸ್ಮೃತಿ ಮಂದಾನ ಸಾಧನೆಗೆ ಕ್ರಿಕೆಟ್‌ ಲೋಕದಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿವೆ. 1⃣2⃣7⃣ 2⃣1⃣6⃣ 2⃣2⃣ 1⃣ @mandhana_smriti . 👏 👏 # # 👉 ://./seh1NVa8gu ../ . @mandhana_smriti. . 👏🏻 # ../nS6am012nL . ’ 💯 # #. @mandhana_smriti @ @mandhana_smriti. 👏🏻 # @mandhana_smriti! . ! 👏🏻# # ../EmwI7ds66O ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.