ಕ್ರಿಕೆಟ್‌: ಜವಾಹರ್ ಸ್ಪೋರ್ಟ್ಸ್ ಕ್ಲಬ್ ಚಾಂಪಿಯನ್ ಬೆಂಗಳೂರು: ಜವಾಹರ್ ಸ್ಪೋರ್ಟ್ಸ್ ಕ್ಲಬ್ (1) ತಂಡ ರಾಜ್ಯ ಕ್ರಿಕೆಟ್ ಸಂಸ್ಥೆಯು ಎಂ.ಎ.ಟಿ ಆಚಾರ್ಯ ಶೀಲ್ಡ್‌ಗಾಗಿ ಆಯೋಜಿಸಿದ್ದ ಗುಂಪು ಒಂದರ ಎರಡನೇ ಡಿವಿಷನ್ಕ್ರಿಕೆಟ್ ಲೀಗ್‌ ಟೂರ್ನಿಯಲ್ಲಿ ಚಾಂಪಿಯನ್ ಆಯಿತು. ಬುಧವಾರ ನಡೆದ ಪಂದ್ಯದಲ್ಲಿ ಜವಾಹರ್ ಕ್ಲಬ್‌ ತಂಡ ಜುಪಿಟರ್ ಕ್ಲಿಕೆಟರ್ಸ್ ಅಸೋಸಿಯೇಷನ್‌ ತಂಡವನ್ನು 56 ರನ್‌ಗಳಿಂದ ಮಣಿಸಿತು. ಮಳೆಯಿಂದಾಗಿ ಪಂದ್ಯವನ್ನು ತಡವಾಗಿ ಆರಂಭವಾಯಿತು. ಹೀಗಾಗಿ 40 ಓವರ್‌ಗಳಿಗೆ ಸೀಮಿತಗೊಳಿಸಲಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಜವಾಹರ್‌ ತಂಡ ಎಂಟು ವಿಕೆಟ್‌ಗಳಿಗೆ 262 ರನ್ ಗಳಿಸಿತು. ಪ್ರವೇಶ್ ಕೆ.ಎಂ ಮೂರು ಸಿಕ್ಸರ್ ಮತ್ತು ನಾಲ್ಕು ಬೌಂಡರಿ ಸಿಡಿಸಿ 61 ಎಸೆತಗಳಲ್ಲಿ 62 ರನ್ ಗಳಿಸಿದರು. ಕೃತಿಕ್ ಕೃಷ್ಣ 53 ಎಸೆತಗಳಲ್ಲಿ ನಾಲ್ಕು ಬೌಂಡರಿಗಳೊಂದಿಗೆ 51 ರನ್ ಕಲೆ ಹಾಕಿದರು. ಚೇತನ್ ಎಲ್‌.ಆರ್‌ 49 ರನ್ ಗಳಿಸಿದರು. ಗುರಿ ಬೆನ್ನತ್ತಿದ ಜುಪಿಟರ್ ತಂಡಕ್ಕೆ 37.5 ಓವರ್‌ಗಳಲ್ಲಿ 206 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಸಿಮೋನ್ ಲೂಯಿಸ್ ಮತ್ತು ರಿಷಿ ಭನ್ಸಾಲಿ ತಲಾ ಎರಡು ವಿಕೆಟ್ ಕಬಳಿಸಿದರು. ಸಂಕ್ಷಿಪ್ತ ಸ್ಕೋರು: ಜವಾಹರ್ ಸ್ಪೋರ್ಟ್ಸ್ ಕ್ಲಬ್‌ (1): 40 ಓವರ್‌ಗಳಲ್ಲಿ 8ಕ್ಕೆ 262 (ಚೇತನ್‌ 49, ಕೃತಿಕ್ ಕೃಷ್ಣ 51, ಪ್ರವೇಶ್‌ ಕೆ.ಎಂ 62; ಚಿರಂತ್ 40ಕ್ಕೆ3, ಜಾಫರ್ ಅಲಿ 41ಕ್ಕೆ 2); ಜುಪಿಟರ್ ಕ್ಲಿಕೆಟರ್ಸ್ ಅಸೋಸಿಯೇಷನ್‌: 37.5 ಓವರ್‌ಗಳಲ್ಲಿ 206 (ನಿಹಾಲ್ ಭಟ್ಕಳ್‌ಕರ್‌ 31; ಸಿಮೋನ್ ಲೂಯಿಸ್ 31ಕ್ಕೆ2, ರಿಷಿ ಭನ್ಸಾಲಿ 17ಕ್ಕೆ2). ಫಲಿತಾಂಶ:ಜವಾಹರ್ ಸ್ಪೋರ್ಟ್ಸ್ ಕ್ಲಬ್‌ಗೆ 56 ರನ್‌ಗಳ ಜಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.