2021: ಅತಿ ವೇಗದ ಎಸೆತ; ಉಮ್ರಾನ್‌ ಮಲಿಕ್ ಜೆರ್ಸಿಗೆ ಸಹಿ ಮಾಡಿದ ಕೊಹ್ಲಿ ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ 2021ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಅತಿ ವೇಗದಲ್ಲಿ ಬೌಲಿಂಗ್ ಮಾಡಿರುವ ದಾಖಲೆಗೆ ಭಾಜನರಾಗಿರುವ ಭರವಸೆಯ ಯುವ ವೇಗದ ಬೌಲರ್ ಉಮ್ರಾನ್ ಮಲಿಕ್‌ ಎಲ್ಲೆಡೆಯಿಂದ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಪಂದ್ಯದ ಬಳಿಕ ಉಮ್ರಾನ್ ಮಲಿಕ್ ಜೆರ್ಸಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಸಹಿ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಇದನ್ನೂ ಓದಿ: ಉಮ್ರಾನ್ ಮಲಿಕ್ ಚೊಚ್ಚಲ ಐಪಿಎಲ್ ಪಂದ್ಯ ಬುಧವಾರ ಆರ್‌ಸಿಬಿ ವಿರುದ್ಧ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಉಮ್ರಾನ್ ಮಲಿಕ್, ಗಂಟೆಗೆ 153 ಕಿ.ಮೀ. ವೇಗದಲ್ಲಿ ಚೆಂಡು ಎಸೆದಿದ್ದರು. ಈ ಮೂಲಕ ನ್ಯೂಜಿಲೆಂಡ್‌ನ ಲಾಕಿ ಫರ್ಗ್ಯುಸನ್‌ ದಾಖಲೆಯನ್ನು ಮುರಿದಿದ್ದಾರೆ. @' 😊 👍# | # | @ ../oDmXWpf2d0 ಪಂದ್ಯದ ಬಳಿಕ ಉಮ್ರಾನ್ ಮಲಿಕ್ ಬಗ್ಗೆ ವಿರಾಟ್ ಕೊಹ್ಲಿ ಹಾಗೂ ಹೈದರಾಬಾದ್ ನಾಯಕ ಕೇನ್ ವಿಲಿಯಮ್ಸನ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ 21 ವರ್ಷದ ಯುವ ವೇಗದ ಬೌಲರ್ ಉಮ್ರಾನ್ ಮಲಿಕ್, ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಚೊಚ್ಚಲ ಐಪಿಎಲ್ ಪಂದ್ಯವನ್ನಾಡಿದರು. ಅಲ್ಲದೆ ತಮ್ಮ ಮೊದಲ ಪಂದ್ಯದಲ್ಲೇ ಗಂಟೆಗೆ 150 ಕಿ.ಮೀ.ಗೂ ಹೆಚ್ಚು ವೇಗದಲ್ಲಿ ಬೌಲಿಂಗ್ ಮಾಡಿದ್ದರು. ಸನ್‌ರೈಸರ್ಸ್ ಹೈದರಾಬಾದ್ ತಂಡದ ನೆಟ್ ಬೌಲರ್ ಆಗಿ ಯುಎಇ ಪಯಣ ಬೆಳೆಸಿದ್ದ ಉಮ್ರಾನ್ ಮಲಿಕ್, ಕೋವಿಡ್‌ಗೆ ತುತ್ತಾಗಿದ್ದ ತಂಗರಸು ನಟರಾಜನ್ ಅವರ ಸ್ಥಾನವನ್ನು ತುಂಬಿದ್ದರು. ಈಗ ಐಪಿಎಲ್‌ನಲ್ಲಿ ತಮ್ಮ ಛಾಪು ಒತ್ತಿದ್ದಾರೆ. ... # # ../Wf9fPaj822 ಐಪಿಎಲ್ 2021ರ ಅತಿ ವೇಗದ ಎಸೆತಗಳು: 1. ಉಮ್ರಾನ್ ಮಲಿಕ್: 152.95 2. ಲಾಕಿ ಫರ್ಗ್ಯುಸನ್: 152.75 3. ಲಾಕಿ ಫರ್ಗ್ಯುಸನ್: 152.74 4. ಉಮ್ರಾನ್ ಮಲಿಕ್: 151.97 5. ಉಮ್ರಾನ್ ಮಲಿಕ್: 151.77 ' 150kmph+ 🔥🔥 💙@umranmalik__ # # # ../GQQ1Kd6EiY ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.