: ಭಾರತಕ್ಕೆ ಆರಂಭಿಕ ಆಘಾತ, ಮಳೆ ಅಡಚಣೆ ಎಜ್‌ಬಾಸ್ಟನ್: ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟಿರುವ ಟೀಮ್ ಇಂಡಿಯಾ ಆರಂಭಿಕ ಆಘಾತಕ್ಕೊಳಗಾಗಿದೆ. ಈ ನಡುವೆ ಮಳೆ ಪಂದ್ಯಕ್ಕೆ ಅಡಚಣೆಯಾಗಿದೆ. ಈ ವೇಳೆಗೆ ಭಾರತ ತಂಡವು 20.3 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 57 ರನ್ ಗಳಿಸಿದೆ. ಆರಂಭಿಕ ಬ್ಯಾಟರ್‌ಗಳಾದ ಶುಭಮನ್ ಗಿಲ್ (17) ಹಾಗೂ ಚೇತೇಶ್ವರ ಪೂಜಾರ (13) ವಿಕೆಟ್‌ ನಷ್ಟವಾಗಿದ್ದು, ಹಿನ್ನಡೆಗೊಳಗಾಗಿದೆ. .# 53/2 1 ://./ # , 12.48 (5.18 ) ../Xmxv2QIYRq ಈ ಎರಡು ವಿಕೆಟ್‌ಗಳು ಜೇಮ್ಸ್ ಆ್ಯಂಡ್ರೆಸನ್ ಪಾಲಾಯಿತು. ಈ ಮೊದಲು ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್, ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಕೋವಿಡ್‌ನಿಂದಾಗಿ ಪ್ರತ್ಯೇಕವಾಸದಲ್ಲಿರುವ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾವನ್ನು ಜಸ್‌ಪ್ರೀಮ್ ಬೂಮ್ರಾ ಮುನ್ನಡೆಸುತ್ತಿದ್ದಾರೆ. 6.45 2nd - 6.45 8.45 3rd - 9.05 11 # ../wtw5L7bPcv 🇮🇳# ../alP32vfabj ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.