2021 | ಅಂಪೈರಿಂಗ್ ಲೋಪಗಳಿಗೆ ಗಾವಸ್ಕರ್ ಕಿಡಿ ದುಬೈ: ಐಪಿಎಲ್ ಟೂರ್ನಿಯಲ್ಲಿ ಆಗುತ್ತಿರುವ ಅಂಪೈರಿಂಗ್ ಲೋಪಗಳ ಬಗ್ಗೆ ಭಾರತ ತಂಡದ ಮಾಜಿ ನಾಯಕ ಸುನೀಲ್ ಗಾವಸ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೋಮವಾರ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಪಂದ್ಯದಲ್ಲಿ ಅಂಪೈರ್ ಅನಿಲ್ ಚೌಧರಿ ಅವರು ನೋಬಾಲ್ ತೀರ್ಪು ಬದಲಿಸಿ ವೈಡ್ ಬಾಲ್ ನೀಡಿದ್ದರು. ಈ ಕುರಿತು ಸ್ಟಾರ್‌ ಸ್ಪೋರ್ಟ್ಸ್‌ ವೀಕ್ಷಕ ವಿವರಣೆಯಲ್ಲಿ ಗಾವಸ್ಕರ್ ಕಿಡಿ ಕಾರಿದ್ದಾರೆ. ‘ಆ ಎಸೆತವು ನೋಬಾಲ್ ಆಗಿರುವುದು ಸ್ಪಷ್ಟವಾಗಿತ್ತು. ಈ ಹಿಂದೆ ಟಿವಿ ಅಂಪೈರ್‌ಗಳು ಕೆಲವು ತೀರ್ಪುಗಳು ಸೋಲು–ಗೆಲುವು ನಿರ್ಧರಿಸುವ ಮಟ್ಟಿಗೆ ಪರಿಣಾಮ ಬೀರಿದ್ದಿದೆ. ಆದ್ದರಿಂದ ಇಂತಹ ತಪ್ಪುಗಳು ನಡೆಯಬಾರದು’ ಎಂದಿದ್ದಾರೆ. ಪಂದ್ಯದಲ್ಲಿ ಡ್ವೇನ್ ಬ್ರಾವೊ ಹಾಕಿದ್ದ ಆ ಎಸೆತವು ಆಫ್‌ಸ್ಟಂಪಿನಾಚೆ ಪುಟಿದಿತ್ತು. : ಹೊಸ ತಂಡಗಳಿಗೆ ಮೂಲಬೆಲೆಯ ಮೌಲ್ಯವರ್ಧನೆ ಖಚಿತ - ನೆಸ್ ವಾಡಿಯಾ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.