ಪೊಲಾರ್ಡ್ 'ಟಾಪ್ 5' ಟಿ20 ಆಟಗಾರರ ಪಟ್ಟಿಯಲ್ಲಿ ವಿರಾಟ್, ರೋಹಿತ್‌ಗಿಲ್ಲ ಸ್ಥಾನ! ದುಬೈ: ವೆಸ್ಟ್‌ಇಂಡೀಸ್‌‌ನ ಟ್ವೆಂಟಿ-20 ಕ್ರಿಕೆಟ್ ತಂಡದ ನಾಯಕ ಕೀರನ್ ಪೊಲಾರ್ಡ್, ವಿಶ್ವ ಕ್ರಿಕೆಟ್‌ನ ಐವರು ಅಗ್ರ ಟ್ವೆಂಟಿ-20 ಕ್ರಿಕೆಟ್ ಆಟಗಾರರನ್ನು ಹೆಸರಿಸಿದ್ದಾರೆ. ಆದರೆ ಅಚ್ಚರಿಯೆಂಬಂತೆ ಪೊಲಾರ್ಡ್ ಆರಿಸಿದ ಪಟ್ಟಿಯಲ್ಲಿ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಸ್ಥಾನ ಪಡೆದಿಲ್ಲ. ಇದನ್ನೂ ಓದಿ:ಟಿ20 ಕ್ರಿಕೆಟ್‌ನಲ್ಲಿ 400 ಸಿಕ್ಸರ್; ವಿಶಿಷ್ಟ ದಾಖಲೆ ಬರೆದ ಹಿಟ್‍ಮ್ಯಾನ್ ಆದರೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ನಾಲ್ಕನೇ ಸ್ಥಾನ ನೀಡಿದ್ದಾರೆ. , 🌟 ’ #T20WorldCup 🏆://./Lwivepgp9n ಪೊಲಾರ್ಡ್ ಆಯ್ಕೆ ಮಾಡಿದ 'ಟಾಪ್ 5' ಟಿ20 ಆಟಗಾರರ ಪಟ್ಟಿ ಇಂತಿದೆ: 1. ಕ್ರಿಸ್ ಗೇಲ್ 2. ಲಸಿತ್ ಮಾಲಿಂಗ 3. ಸುನಿಲ್ ನಾರಾಯಣ್ 4. ಮಹೇಂದ್ರ ಸಿಂಗ್ ಧೋನಿ 5. ಕೀರನ್ ಪೊಲಾರ್ಡ್ ಪಟ್ಟಿಯಲ್ಲಿ ತಮ್ಮನ್ನು ಸೇರಿದಂತೆ ವೆಸ್ಟ್‌ಇಂಡೀಸ್‌ನ ಮೂವರು ಆಟಗಾರರನ್ನು ಆರಿಸಿದ್ದಾರೆ. ಅಲ್ಲದೆ ಟಿ20 ಮಾದರಿಯ ಶ್ರೇಷ್ಠ ಆಟಗಾರನ ಪಟ್ಟವನ್ನು ಕ್ರಿಸ್ ಗೇಲ್ ಅವರಿಗೆ ನೀಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.