ಡ್ವೇನ್ ಬ್ರಾವೊ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ನೂತನ ವಿಶ್ವ ದಾಖಲೆ ದುಬೈ: ಟ್ವೆಂಟಿ-20 ಕ್ರಿಕೆಟ್‌ ಮಾದರಿಯಲ್ಲಿ 550ನೇ ವಿಕೆಟ್‌ ಕಬಳಿಸಿರುವ ವೆಸ್ಟ್‌ಇಂಡೀಸ್‌ನ ಡ್ವೇನ್ ಬ್ರಾವೊ ನೂತನ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಬ್ರಾವೊ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಮೊದಲ ಕ್ವಾಲಿಫೈಯರ್‌ ಹಣಾಹಣಿಯಲ್ಲಿ ನೂತನ ಮೈಲಿಗಲ್ಲು ತಲುಪಿದರು. ಇದನ್ನೂ ಓದಿ: 2021: ಗಾಯಕವಾಡ್-ಉತ್ತಪ್ಪ, ವಿಂಟೇಜ್ ಧೋನಿ ಮಿಂಚು; ಫೈನಲ್‌ಗೆ ಚೆನ್ನೈ ಇದರೊಂದಿಗೆ ಟ್ವೆಂಟಿ-20 ಕ್ರಿಕೆಟ್‌ನಲ್ಲಿ 550 ವಿಕೆಟ್ ಗಳಿಸಿದ ವಿಶ್ವದ ಮೊತ್ತ ಮೊದಲ ಬೌಲರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 500ಕ್ಕೂ ಹೆಚ್ಚು ವಿಕೆಟ್ ಪಡೆದ ವಿಶ್ವದ ಏಕಮಾತ್ರ ಬೌಲರ್ ಬ್ರಾವೊ ಆಗಿದ್ದಾರೆ. 506ನೇ ಪಂದ್ಯದಲ್ಲಿ (479 ಇನ್ನಿಂಗ್ಸ್) ಬ್ರಾವೊ ಈ ದಾಖಲೆ ಬರೆದಿದ್ದಾರೆ. ದಕ್ಷಿಣ ಆಫ್ರಿಕಾದ ಇಮ್ರಾನ್ ತಾಹೀರ್ ಎರಡನೇ ಸ್ಥಾನದಲ್ಲಿದ್ದು, ಒಟ್ಟು 420 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಟ್ಟೆಂಟಿ-20 ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಸರದಾರರು: 1. ಡ್ವೇನ್ ಬ್ರಾವೊ: 550 2. ಇಮ್ರಾನ್ ತಾಹೀರ್: 420 3. ಸುನಿಲ್ ನಾರಾಯಣ್: 419 4. ರಶೀದ್ ಖಾನ್: 392 5. ಲಸಿತ್ ಮಾಲಿಂಗ: 390 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.