2021: 'ಡೆಫಿನೇಟ್ಲಿ ನಾಟ್'; ಕಪ್ ಗೆಲ್ಲುವ ಮೂಲಕ ತಕ್ಕ ಉತ್ತರ ನೀಡಿದ ಧೋನಿ ದುಬೈ: ಕಳೆದ ವರ್ಷ ಐಪಿಎಲ್‌ನಲ್ಲಿ ಕಳಪೆ ಪ್ರದರ್ಶನದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಎದುರಾದ ಕೊನೆಯ ಪ್ರಶ್ನೆ ಇದಾಗಿತ್ತು. ಇದು ನಿಮ್ಮ ಕೊನೆಯ ಪಂದ್ಯವೇ? ಅಂದು ಧೋನಿ ನೀಡಿದ ಸ್ಪಷ್ಟ ಉತ್ತರ 'ಡೆಫಿನೇಟ್ಲಿ ನಾಟ್' (ಖಂಡಿತವಾಗಿಯೂ ಅಲ್ಲ) ಎಂದಾಗಿತ್ತು. ಇದನ್ನೂ ಓದಿ: 2021: ಐಪಿಎಲ್‌ಗೆ ವಿದಾಯ? ರಹಸ್ಯ ಬಿಟ್ಟುಕೊಡದ ಧೋನಿ ಹೌದು, ತಮ್ಮ ಮಾತಿನಂತೆ ಆಡಿರುವ ಮಹಿ, ಐಪಿಎಲ್ 2021ರಲ್ಲಿ ಟ್ರೋಫಿ ಗೆದ್ದು, 40ರ ಹರೆಯದಲ್ಲೂ ತಮ್ಮ ಸಾಮರ್ಥ್ಯ ಸಾಬೀತು ಮಾಡಿದ್ದಾರೆ. 2020-# 💛 2021- # 💛@ 3000♥️😘😭#💛 ../SvUod6zHo8 ಐಪಿಎಲ್‌ನಲ್ಲಿ ಧೋನಿ ಕೆರಿಯರ್ ಮುಗಿಯಿತು ಎಂದು ವಿಮರ್ಶೆ ಮಾಡಿದವರಿಗೆ ನಾಲ್ಕನೇ ಕಪ್ ಗೆಲ್ಲುವ ಮೂಲಕ ತಕ್ಕ ಉತ್ತರ ನೀಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಮಾನಿಗಳು ಇದನ್ನೇ ಉಲ್ಲೇಖಿಸಿ ಧೋನಿ ಅವರನ್ನು ಕೊಂಡಾಡಿದ್ದಾರೆ. ಏತನ್ಮಧ್ಯೆ ಈ ಸಲ ಕಪ್ ಗೆದ್ದ ಬಳಿಕ ಧೋನಿಗೆ ಮಗದೊಂದು ಪ್ರಶ್ನೆ ಎದುರಾಗಿತ್ತು. ಸಿಎಸ್‌ಕೆಗಾಗಿ ಕಳೆದ 12 ವರ್ಷಗಳಲ್ಲಿ ನೀವು ಬಿಟ್ಟು ಹೋದ ಪರಂಪರೆಯ ಬಗ್ಗೆ ಹೆಮ್ಮೆ ಪಡುತ್ತೀರಾ ಎಂದು ಕೇಳಿದಾಗ, 'ನಾನಿನ್ನೂ ಬಿಟ್ಟು ಹೋಗಿಲ್ಲ' ಎಂದು ನಗುಮುಖದಿಂದಲೇ ಉತ್ತರಿಸಿದರು. ಈ ಮೂಲಕ ಚೆನ್ನೈ ಅಭಿಮಾನಿಗಳಿಗೆ ಸಿಹಿ ಸುದ್ದಿ ಬಿತ್ತರಿಸಿದ್ದಾರೆ. # -! 😄💪🏽 ! # @ , # 🔥🔥 ../z5Rnhx07PX … … … 💛🦁# # # 💛🦁 4th # # # 🏆 # . ../swFVAy4AFU # 🥳 .. & ' ' 😭😭 ../YgoIVLCn6L “ ” “’ ” # ’ 💛🤩🥳🏆 ../WseMGw2uzG ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.