T20 : ಲಂಕಾಗೆ ಸುಲಭ ತುತ್ತಾದ ನಮೀಬಿಯಾ ಅಬುಧಾಬಿ: ಐಸಿಸಿ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಸೋಮವಾರ 'ಎ' ಗುಂಪಿನಲ್ಲಿ ನಡೆದ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಶ್ರೀಲಂಕಾ ಏಳು ವಿಕೆಟ್ ಅಂತರದ ಗೆಲುವು ದಾಖಲಿಸಿದೆ. ಈ ಮೂಲಕ ಎರಡು ಅಂಕಗಳನ್ನು ಕಲೆ ಹಾಕಿದೆ. ಮೊದಲು ಲಂಕಾ ಬೌಲರ್‌ಗಳ ಪ್ರಭಾವಿ ದಾಳಿಗೆ ಕುಸಿತ ಕಂಡ ನಮೀಬಿಯಾ 19.3 ಓವರ್‌ಗಳಲ್ಲಿ 96 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಕ್ರೇಗ್ ವಿಲಿಯಮ್ಸ್ 29, ನಾಯಕ ಗೆರಾರ್ಡ್ ಎರಾಸ್ಮಸ್ (20) ಹಾಗೂ ಜೆಜೆ ಸ್ಮಿಟ್ 12* ರನ್ ಗಳಿಸಿರುವುದನ್ನು ಹೊರತುಪಡಿಸಿದರೆ ಇತರೆ ಯಾವ ಬ್ಯಾಟರ್‌ಗಳಿಗೆ ಮಿಂಚಲು ಸಾಧ್ಯವಾಗಲಿಲ್ಲ. ಲಂಕಾ ಪರ ಮಹೀಶ್‌ ತೀಕ್ಷನ ಮೂರು ಮತ್ತು ಲಹಿರು ಕುಮಾರ ಹಾಗೂ ವನಿಂದು ಹಸರಂಗ ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದರು. 96 💥 ?#T20WorldCup | # | ://./hUHJBqiiI0 ../vQy0NBVWfQ ಬಳಿಕ ಗುರಿ ಬೆನ್ನತ್ತಿದ ಲಂಕಾ ಒಂದು ಹಂತದಲ್ಲಿ 5.1 ಓವರ್‌ಗಳಲ್ಲಿ 26 ರನ್ನಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಜೊತೆಗೂಡಿದ ಆವಿಷ್ಕಾ ಫರ್ನಾಂಡೊ (30*) ಹಾಗೂ ಭಾನುಕಾ ರಾಜಪಕ್ಷ (42*) ಮುರಿಯದ ನಾಲ್ಕನೇ ವಿಕೆಟ್‌ಗೆ 74 ರನ್‌ಗಳ ಜೊತೆಯಾಟ ಕಟ್ಟಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಈ ಮೂಲಕ 13.3 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.