ವಿರಾಟ್, ವಿಲಿಯರ್ಸ್ ಜೊತೆ ಆಡಲು ಸಾಧ್ಯವಾಗಿರುವುದು ಅದೃಷ್ಟ: ಮ್ಯಾಕ್ಸ್‌ವೆಲ್ ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಹ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಅವರೊಂದಿಗೆ ಅಮೂಲ್ಯ ಸಮಯವನ್ನು ಕಳೆದಿರುವುದು ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ನೆರವಾಗಿದೆ ಎಂದು ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ ತಿಳಿಸಿದ್ದಾರೆ. 'ಇಬ್ಬರು ಶ್ರೇಷ್ಠ ಆಟಗಾರರೊಂದಿಗೆ ಒಂದೇ ತಂಡದಲ್ಲಿ ಆಡಲು ಅವಕಾಶ ಲಭಿಸಿರುವುದು ನನ್ನ ಅದೃಷ್ಟ. ತಮ್ಮ ಅನುಭವವನ್ನು ಹಂಚಿಕೊಳ್ಳಲು ಮತ್ತು ಆಟದ ಬಗ್ಗೆ ನನ್ನೊಂದಿಗೆಚರ್ಚಿಸಲುಮುಕ್ತರಾಗಿದ್ದರು. ಇದರಿಂದ ಆತ್ಮವಿಶ್ವಾಸ ಇಮ್ಮಡಿಯಾಗುತ್ತದೆ. ಮತ್ತಷ್ಟು ಸಂತಸ ಮೂಡುತ್ತದೆ. ಇವೆಲ್ಲವೂ ಆರಾಮದಾಯಕ ವಾತಾವರಣ ಸೃಷ್ಟಿ ಮಾಡಲು ಸಹಕಾರಿಯಾಗಿದೆ' ಎಂದು ಹೇಳಿದರು. ಇದನ್ನೂ ಓದಿ:ಧೋನಿ ನಾಯಕರಾಗಿದ್ದಾಗಲೂ ನಮ್ಮ ಮಾರ್ಗದರ್ಶಕರಾಗಿದ್ದರು: ರಾಹುಲ್ 'ಪ್ರತಿ ದಿನವೂ ಕಲಿಕೆಯ ಅನುಭವವಾಗಿತ್ತು. ಪ್ರತಿ ದಿನವೂ ಹೊಸತನವನ್ನು ಕಂಡುಕೊಳ್ಳುತ್ತಿದ್ದೆ. ಅವರು ಹೇಗೆ ಕ್ರಿಕೆಟ್ ಅನ್ನು ಸಮೀಪಿಸುತ್ತಾರೆ ಎಂಬುದನ್ನು ಗಮನ ವಹಿಸುತ್ತಿದ್ದೆ. ವಿಶ್ವದ ಅತ್ಯುತ್ತಮ ಆಟಗಾರರಿಂದ ಕಲಿಯಲು ಅವಕಾಶ ನೀಡಿರುವುದಕ್ಕೆ ನಾನು ಯಾವತ್ತೂ ಐಪಿಎಲ್‌ಗೆ ಕೃತಜ್ಞನಾಗಿರುತ್ತೇನೆ' ಎಂದು ಹೇಳಿದರು. ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಪರ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವನ್ನು ಮ್ಯಾಕ್ಸ್‌ವೆಲ್ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಐಪಿಎಲ್‌ನಲ್ಲಿನ ಉತ್ತಮ ಫಾರ್ಮ್ ಮುಂದುವರಿಸುವಇರಾದೆಯಲ್ಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.