T20 : ಐರ್ಲೆಂಡ್ ಕನಸು ಭಗ್ನ; ನಮೀಬಿಯಾ ಸೂಪರ್-12ಕ್ಕೆ ಲಗ್ಗೆ ಶಾರ್ಜಾ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಶುಕ್ರವಾರ 'ಎ' ಗುಂಪಿನಲ್ಲಿ ನಡೆದ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಎಂಟು ವಿಕೆಟ್ ಅಂತರದ ಗೆಲುವು ದಾಖಲಿಸಿರುವ ನಮೀಬಿಯಾ, 'ಸೂಪರ್-12' ಹಂತಕ್ಕೆ ಲಗ್ಗೆಯಿಟ್ಟಿದೆ. ಇದು ನಮೀಬಿಯಾ ಅಭಿಮಾನಿಗಳ ಪಾಲಿಗೆ ಐತಿಹಾಸಿಕ ಕ್ಷಣವಾಗಿದೆ. ಅತ್ತ ಐರ್ಲೆಂಡ್ ವಿಶ್ವಕಪ್ ಕನಸು ಭಗ್ನಗೊಂಡಿದೆ. ✅ 12 ✨#T20WorldCup | # | ://./xv8AGpwHXi ../p46oBP3Acj ಮೊದಲು ಬ್ಯಾಟಿಂಗ್ ನಡೆಸಿದ ಐರ್ಲೆಂಡ್ ಎಂಟು ವಿಕೆಟ್ ನಷ್ಟಕ್ಕೆ 125 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಬಳಿಕ ಗುರಿ ಬೆನ್ನತ್ತಿದ ನಮೀಬಿಯಾ ನಾಯಕ ಗೆರಾರ್ಡ್‌ ಎರಾಸ್ಮಸ್‌ ಸಮಯೋಚಿತ ಅರ್ಧಶತಕದ (53*) ನೆರವಿನಿಂದ 18.3 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. 49 ಎಸೆತಗಳನ್ನು ಎದುರಿಸಿದ ಎರಾಸ್ಮಸ್ ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 53 ರನ್ ಗಳಿಸಿ ಔಟಾಗದೆ ಉಳಿದರು. ನಾಯಕನಿಗೆ ತಕ್ಕ ಸಾಥ್ ನೀಡಿದ ಡೇವಿಡ್ ವೈಸ್ (28*) ಹಾಗೂ ಜೇನ್‌ ಗ್ರೀನ್‌ (24) ರನ್‌ಗಳ ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು. ಈ ಮೊದಲು ಬ್ಯಾಟಿಂಗ್ ನಡೆಸಿದ ಐರ್ಲೆಂಡ್ ತಂಡಕ್ಕೆ ಪಾಲ್ ಸ್ಟಿರ್ಲಿಂಗ್ (38) ಹಾಗೂ ಕೆವಿನ್ ಒಬ್ರಿಯಾನ್ (25) ಉತ್ತಮ ಆರಂಭವೂದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 7.2 ಓವರ್‌ಗಳಲ್ಲಿ 62 ರನ್‌ಗಳ ಜೊತೆಯಾಟ ಕಟ್ಟಿದರು. ☝️ 6.#T20WorldCup | # | ://./xv8AGpwHXi ../ ಈ ಆರಂಭಿಕ ಜೋಡಿ ಪತನದೊಂದಿಗೆ ಏಕಾಏಕಿ ಕುಸಿತ ಕಂಡ ಐರ್ಲೆಂಡ್ ಬಳಿಕ ಚೇತರಿಸಿಕೊಳ್ಳಲಿಲ್ಲ. ನಾಯಕ ಆಂಡ್ರ್ಯೂ ಬಾಲ್ಬಿರ್ನಿ (21) ಹೊರತಾಗಿ ಇತರೆ ಯಾವ ಬ್ಯಾಟರ್ ಹೋರಾಟದ ಮನೋಭಾವವನ್ನೇ ತೋರಲಿಲ್ಲ. ಪರಿಣಾಮ ಎಂಟು ವಿಕೆಟ್ ನಷ್ಟಕ್ಕೆ 125 ರನ್ ಗಳಿಸಲಷ್ಟೇ ಸಮರ್ಥವಾಯಿತು. ನಮೀಬಿಯಾ ಪರ ಜಾನ್ ಫ್ರಿಲಿಂಚ್‌ ಮೂರು ಡೇವಿಡ್ ವೈಸ್ ಎರಡು ವಿಕೆಟ್ ಕಿತ್ತು ಮಿಂಚಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.