ಹತಾಶರಾಗಿ ಕೈಗೆ ಗಾಯ ಮಾಡಿಕೊಂಡಿದ್ದ ಕಾನ್ವೆ ಟಿ20 ವಿಶ್ವಕಪ್‌ ಫೈನಲ್‌ನಿಂದ ಔಟ್ ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಮಹತ್ವದ ಫೈನಲ್ ಪಂದ್ಯಕ್ಕೂ ಮುನ್ನ ನ್ಯೂಜಿಲೆಂಡ್ ತಂಡವು ಆಘಾತಕ್ಕೊಳಗಾಗಿದೆ. ಗಾಯದ ಸಮಸ್ಯೆಗೆ ತುತ್ತಾಗಿರುವ ನ್ಯೂಜಿಲೆಂಡ್ ತಂಡದವಿಕೆಟ್ ಕೀಪರ್,ಬ್ಯಾಟರ್ ಡೆವೊನ್ ಕಾನ್ವೆ, ಫೈನಲ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. @T20WorldCup . ’ -. | ://./ #T20WorldCup ../JIm9o6Rhxe ಇಂಗ್ಲೆಂಡ್ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಕಾನ್ವೆ, ಔಟ್ ಆದ ಹತಾಶೆಯಲ್ಲಿ ಬಲಗೈಗೆ ಗಾಯ ಮಾಡಿಕೊಂಡಿದ್ದರು. ನಿರ್ಣಾಯಕ ಹಂತದಲ್ಲಿ ದೊಡ್ಡ ಹೊಡೆತಕ್ಕೆ ಮುಂದಾದ ಕಾನ್ವೆ, ಸ್ಟಂಪ್ ಔಟ್ ಆಗಿದ್ದರು. ಈ ವೇಳೆ ಸಿಟ್ಟಿಗೆದ್ದ ಕಾನ್ವೆ, ತಮ್ಮದೇ ಬ್ಯಾಟ್‌ಗೆ ಬಲಗೈಯಿಂದ ಬಲವಾಗಿ ಗುದ್ದಿದ್ದರು. ಬಳಿಕ ಎಕ್ಸ್-ರೇ ತೆಗೆಸಿದಾಗ ಕೈಗೆ ಪೆಟ್ಟಾಗಿರುವುದು ಖಚಿತವಾಗಿದೆ. ಈಗ ವಿಶ್ರಾಂತಿಯನ್ನು ಸೂಚಿಸಲಾಗಿದೆ. ಇದನ್ನೂ ಓದಿ:T20 : ಆಸೀಸ್ ವಿರುದ್ಧ ಸೆಮಿಫೈನಲ್‌ಗೂ ಮುನ್ನ ಐಸಿಯುಗೆ ದಾಖಲಾಗಿದ್ದ ರಿಜ್ವಾನ್! ಕಾನ್ವೆ ಅನುಪಸ್ಥಿತಿಯು ನ್ಯೂಜಿಲೆಂಡ್‌ಗೆ ಹಿನ್ನಡೆಯಾಗಿ ಪರಿಣಮಿಸಲಿದೆ ಎಂದೇ ಅಂದಾಜಿಸಲಾಗಿದೆ. ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ಒಡ್ಡಿದ 167 ರನ್ ಗುರಿ ಬೆನ್ನತ್ತುವಲ್ಲಿ ಕಾನ್ವೆ ಪಾತ್ರ ಮಹತ್ವದೆನಿಸಿತ್ತು. ಅಲ್ಲದೆ 46 ರನ್‌ಗಳ ಉಪಯುಕ್ತ ಇನ್ನಿಂಗ್ಸ್ ಕಟ್ಟಿದ್ದರು. ಟ್ವೆಂಟಿ-20 ವಿಶ್ವಕಪ್ ಮುಗಿದ ಬೆನ್ನಲ್ಲೇ ಭಾರತ ವಿರುದ್ಧ ನಡೆಯಲಿರುವ ಸರಣಿಗೂ ಕಾನ್ವೆ ಅಲಭ್ಯರಾಗಿದ್ದಾರೆ. = & ..# .. -, ' '.. ! # #T20WorldCuppic../5ySz4bH6Lo ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.