ಮುಷ್ತಾಕ್ ಅಲಿ ಟ್ರೋಫಿ: ಕರ್ನಾಟಕ ತಂಡದ ನಾಯಕನಾಗಿ ಮನೀಷ್ ಪಾಂಡೆ ಮುಂದುವರಿಕೆ ಬೆಂಗಳೂರು: ಮಧ್ಯಮ ಕ್ರಮಾಂಕದ ಬ್ಯಾಟರ್‌ ಮನೀಷ್ ಪಾಂಡೆ ಅವರು ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಕ್ರಿಕೆಟ್ ಟೂರ್ನಿಯ ನಾಕೌಟ್ ಹಂತದಲ್ಲಿ ಕರ್ನಾಟಕ ತಂಡದ ನಾಯಕನಾಗಿ ಮುಂದುವರಿಯಲಿದ್ದಾರೆ. ಟೂರ್ನಿಯ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯಗಳು ಇದೇ 16ರಂದು ನಡೆಯಲಿದ್ದು ದೆಹಲಿಯಲ್ಲಿ ಕರ್ನಾಟಕ ಮತ್ತು ಸೌರಾಷ್ಟ್ರ ತಂಡಗಳು ಮುಖಾಮುಖಿಯಾಗಲಿವೆ. ಮನೀಷ್ ಪಾಂಡೆ ನೇತೃತ್ವದಲ್ಲಿ ತಂಡ ’ಬಿ‘ ಗುಂಪಿನಲ್ಲಿ ಆಡಿರುವ ಐದು ಪಂದ್ಯಗಳ ಪೈಕಿ ನಾಲ್ಕರಲ್ಲಿ ಜಯ ಗಳಿಸಿತ್ತು. ಮುಂಬೈ, ಬರೋಡ, ಛತ್ತೀಸ್‌ಗಡ ಹಾಗೂ ಸರ್ವಿಸಸ್‌ ಎದುರು ಜಯ ಗಳಿಸಿದ್ದ ತಂಡ ಕೊನೆಯ ಪಂದ್ಯದಲ್ಲಿ ಬಂಗಾಳಕ್ಕೆ ಏಳು ವಿಕೆಟ್‌ಗಳಿಂದ ಮಣಿದಿತ್ತು. ಆದರೆ ನಾಕೌಟ್ ಹಂತ ಪ್ರವೇಶಿಸುವ ತಂಡದ ಹಾದಿಗೆ ಇದು ಅಡ್ಡಿಯಾಗಿರಲಿಲ್ಲ. ತಂಡ: ಮನೀಷ್ ಪಾಂಡೆ (ನಾಯಕ), ಆರ್‌.ಸಮರ್ಥ್‌, ಕೆ.ವಿ.ಸಿದ್ಧಾರ್ಥ್‌, ರೋಹನ್ ಕದಂ, ಅನಿರುದ್ಧ ಜೋಶಿ, ಅಭಿನವ್ ಮನೋಹರ್, ಕರುಣ್ ನಾಯರ್, ಬಿ.ಆರ್‌.ಸಮರ್ಥ್‌ (ವಿಕೆಟ್ ಕೀಪರ್‌), ಶ್ರೇಯಸ್ ಗೋಪಾಲ್‌, ಜೆ.ಸುಚಿತ್‌, ಪ್ರವೀಣ್ ದುಬೆ, ಕೆ.ಸಿ.ಕಾರ್ಯಪ್ಪ, ನಿಹಾಲ್ ಉಳ್ಳಾಲ್‌ (ವಿಕೆಟ್ ಕೀಪರ್‌), ಕೌಶಿಕ್‌ ವಿ, ಪ್ರತೀಕ್ ಜೈನ್, ವೈಶಾಖ್ ವಿ, ದರ್ಶನ್ ಎಂ.ಬಿ, ಆದಿತ್ಯ ಸೋಮಣ್ಣ, ರಿತೇಶ್ ಭಟ್ಕಳ, ವಿದ್ಯಾಧರ ಪಾಟೀಲ. ಕೋಚ್‌: ಯರೇಗೌಡ ಬೌಲಿಂಗ್ ಕೋಚ್‌: ಎಸ್‌.ಅರವಿಂದ್ ಫೀಲ್ಡಿಂಗ್ ಕೋಚ್‌: ದೀಪಕ್ ಚೌಗುಲೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.