T20 : 2019ರಲ್ಲಿ ಬೌಲ್ಟ್; 2021ರಲ್ಲಿ ಬೆಸ್ಟೊ; ಕೈಕೊಟ್ಟ ಲಕ್! ಅಬುಧಾಬಿ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಮುಖಾಮುಖಿಯಲ್ಲಿ ಇಂಗ್ಲೆಂಡ್ ವಿರುದ್ಧ ರೋಚಕ ಗೆಲುವು ದಾಖಲಿಸಿರುವ ನ್ಯೂಜಿಲೆಂಡ್ ಫೈನಲ್‌ಗೆ ಲಗ್ಗೆಯಿಟ್ಟಿದೆ. ಈ ಮೂಲಕ 2019ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಎದುರಾದ ಸೋಲಿಗೆ ಸೇಡು ತೀರಿಸಿಕೊಂಡಿದೆ. ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ನಡುವಣ ಪಂದ್ಯವು ಹಲವಾರು ರೋಚಕ ಕ್ಷಣಗಳಿಗೆ ಎಡೆಮಾಡಿಕೊಟ್ಟಿತು. ಅಂತಿಮ ಕ್ಷಣದ ವರೆಗೂ ಕುತೂಹಲ ಕೆರಳಿಸಿದ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಮಹತ್ವದ ಅವಕಾಶಗಳನ್ನು ಕೈಚೆಲ್ಲಿರುವುದು ಹಿನ್ನಡೆಯಾಗಿ ಪರಿಣಮಿಸಿತ್ತು. ಈ ಪೈಕಿ ಪಂದ್ಯದ ನಿರ್ಣಾಯಕ ಹಂತದಲ್ಲಿ ಇಂಗ್ಲೆಂಡ್ ಫೀಲ್ಡರ್ ಜಾನಿ ಬೆಸ್ಟೊ ಕ್ಯಾಚ್ ಹಿಡಿದರೂ ಮೊಣಕಾಲು ಬೌಂಡರಿ ಗೆರೆಯನ್ನು ಸ್ಪರ್ಶಿಸಿದ ಹಿನ್ನಲೆಯಲ್ಲಿ ಅವಕಾಶ ಕೈತಪ್ಪಿತು. … : @ 2019 : @T20WorldCup @ @jbairstow21’ # @’ @benstokes38 @ @ ../2I565rmTUi ಪರಿಣಾಮ ಕ್ರಿಸ್ ಜಾರ್ಡನ್ ಓವರ್‌ವೊಂದರಲ್ಲಿ 23 ರನ್ ಸೊರೆಗೈದು ಜೇಮ್ಸ್ ನಿಶಾಮ್ ಪಂದ್ಯಕ್ಕೆ ತಿರುವು ನೀಡುವಲ್ಲಿ ಯಶಸ್ವಿಯಾಗಿದ್ದರು. 11 ಎಸೆತಗಳನ್ನು ಎದುರಿಸಿದ್ದ ನಿಶಾಮ್ ಮೂರು ಸಿಕ್ಸರ್ ಹಾಗೂ ಒಂದು ಬೌಂಡರಿ ನೆರವಿನಿಂದ 27 ರನ್ ಗಳಿಸಿ ಇತ್ತಂಡಗಳ ನಡುವಣ ವ್ಯತ್ಯಾಸಕ್ಕೆ ಕಾರಣರಾದರು. 2019ರ ಏಕದಿನ ವಿಶ್ವಕಪ್ ಫೈನಲ್‌ನಲ್ಲೂ ಇದಕ್ಕೆ ಸಮಾನವಾದ ಘಟನೆ ಘಟಿಸಿತ್ತು. ಅಂದು ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್ ಹೊಡೆದ ಚೆಂಡನ್ನು ನ್ಯೂಜಿಲೆಂಡ್‌ನ ಟ್ರೆಂಟ್ ಬೌಲ್ಟ್ ಹಿಡಿಯುವಲ್ಲಿ ಯಶಸ್ವಿಯಾದರೂ ಕಾಲು ಬೌಂಡರಿ ಗೆರೆ ಸ್ಪರ್ಶಿಸಿದ ಹಿನ್ನೆಲೆಯಲ್ಲಿ ಕಿವೀಸ್‌ಗೆ ವಿಶ್ವಕಪ್ ಗೆಲುವಿನ ಅವಕಾಶ ಕೈತಪ್ಪಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.