: ಮಾರ್ಟಿನ್ ಗಪ್ಟಿಲ್‌ಗೆ ತಕ್ಕ ಉತ್ತರ ನೀಡಿದ ದೀಪಕ್ ಚಾಹರ್ ಜೈಪುರ: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಟ್ವೆಂಟಿ-20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಐದು ವಿಕೆಟ್ ಅಂತರದ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ, ಶುಭಾರಂಭ ಮಾಡಿಕೊಂಡಿದೆ. ಈ ನಡುವೆ ಭಾರತ ಹಾಗೂ ನ್ಯೂಜಿಲೆಂಡ್ ಆಟಗಾರರ ನಡುವೆ ಕಾವೇರಿದ ವಾತಾವರಣ ಸೃಷ್ಟಿಯಾಗಿತ್ತು. ಪ್ರಮುಖವಾಗಿಯೂ ತಮ್ಮನ್ನು ಕೆಣಕಲು ಬಂದ ನ್ಯೂಜಿಲೆಂಡ್ ಆರಂಭಿಕ ಬ್ಯಾಟರ್ ಮಾರ್ಟಿನ್ ಗಪ್ಟಿಲ್‌ಗೆ ಭಾರತೀಯ ಬೌಲರ್ದೀಪಕ್ ಚಾಹರ್ ಬಿಸಿ ಮುಟ್ಟಿಸಿದ್ದಾರೆ. 😎 # # # # ../ ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ ಆರು ವಿಕೆಟ್ ನಷ್ಟಕ್ಕೆ 164 ರನ್‌ಗಳ ಸವಾಲಿನ ಮೊತ್ತ ಪೇರಿಸಿತ್ತು. ಮಾರ್ಟಿನ್ ಗಪ್ಟಿಲ್ (70) ಹಾಗೂ ಮಾರ್ಕ್ ಚಾಪ್‌ಮನ್ (63) ಆಕರ್ಷಕ ಅರ್ಧಶತಕಗಳ ನೆರವಿನಿಂದ ಸವಾಲಿನ ಮೊತ್ತ ಪೇರಿಸಲು ನೆರವಾಗಿದ್ದರು. ಇದನ್ನೂ ಓದಿ: 1st T20I : ರೋಹಿತ್, ಸೂರ್ಯ ಮಿಂಚು; ಭಾರತಕ್ಕೆ 5 ವಿಕೆಟ್ ಗೆಲುವು ಈ ಮಧ್ಯೆ ಇನ್ನಿಂಗ್ಸ್‌ನ 18ನೇ ಓವರ್‌ನಲ್ಲಿ ಸಿಕ್ಸರ್ ಬಾರಿಸಿದ ಗಪ್ಟಿಲ್, ಭಾರತದ ಬೌಲರ್ ದೀಪಕ್ ಚಾಹರ್ ಅವರನ್ನು ದಿಟ್ಟಿಸಿ ನೋಡಿದರು. ಆದರೆ ನಂತರದ ಎಸೆತದಲ್ಲೇ ಗಪ್ಟಿಲ್‌ರನ್ನು ಔಟ್ ಮಾಡಿದ ಚಾಹರ್ ಅದೇ ಧಾಟಿಯಲ್ಲಿ ದಿಟ್ಟಿಸಿ ನೋಡುತ್ತಾ ತಿರುಗೇಟು ನೀಡಿದರು. ಈ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಅಂತಿಮವಾಗಿ ಸೂರ್ಯಕುಮಾರ್ ಯಾದವ್ (62) ಹಾಗೂ ನಾಯಕ ರೋಹಿತ್ ಶರ್ಮಾ (48) ಆಕರ್ಷಕ ಆಟದ ನೆರವಿನಿಂದ ಭಾರತ ತಂಡವು ಇನ್ನೂ ಎರಡು ಎಸೆತಗಳು ಬಾಕಿ ಉಳಿದಿರುವಂತೆಯೇ ಐದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. . 📸: +# # # # ../jDQR1fuO5A ' ' . ../eEuTduUr5s ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.