ಅಂಧರ ಕ್ರಿಕೆಟ್‌ ಶಿಬಿರ ಆರಂಭ ಬೆಂಗಳೂರು: ಸಮರ್ಥನಂ ಟ್ರಸ್ಟ್ ಹಾಗೂ ಭಾರತ ಅಂಧರ ಕ್ರಿಕೆಟ್ ಸಂಸ್ಥೆ (ಸಿಎಬಿಐ) ವತಿಯಿಂದ ಇಲ್ಲಿಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ತಂಡದ ತರಬೇತಿ ಶಿಬಿರವು ಸೋಮವಾರ ಆರಂಭವಾಯಿತು. ಸಮರ್ಥನಂ ಟ್ರಸ್ಟ್ ವತಿಯಿಂದ ನಡೆಯುತ್ತಿರುವ 12 ದಿನಗಳ ಶಿಬಿರವನ್ನು ಗ್ಲೋಬಲ್ ಸಿಎಸ್‍ಆರ್ ಹಾಗೂ ಇಂಡಿಯಾ ಮಾರ್ಕೆಂಟಿಂಗ್, ಎನ್‌ಟಿಟಿ ಡೇಟಾ ಸರ್ವೀಸಸ್‍ನ ಉಪಾಧ್ಯಕ್ಷ ಅಂಕೂರ್ ದಾಸ್‍ಗುಪ್ತಾ ಉದ್ಘಾಟಿಸಿದರು. ಎನ್‌ಟಿಟಿ ಡೇಟಾ ಸವೀಸಸ್ ಈ ಶಿಬಿರದ ಪ್ರಾಯೋಜಕತ್ವ ವಹಿಸಿಕೊಂಡಿದೆ. ಸಿಎಬಿಐ ಅಧ್ಯಕ್ಷ, ಸಮರ್ಥನಂ ಟ್ರಸ್ಟ್ ಸಂಸ್ಥಾಪಕ ಡಾ.ಮಹಾಂತೇಶ್ ಜಿ.ಕೆ, ಮಾಜಿ ಕ್ರಿಕೆಟಿಗ ಸದಾನಂದ ವಿಶ್ವನಾಥ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತ ಡಾ.ಎಚ್.ಎನ್. ಗೋಪಾಲಕೃಷ್ಣ, ಸಮೂಹ ಶಿಕ್ಷಣದ ನಿರ್ದೇಶಕಿ ಸುಷ್ಮಾ ಗೋಡಬೋಲೆ ಮತ್ತಿತರರು ಈ ಸಂದರ್ಭದಲ್ಲಿದ್ದರು. ಟಿ20 ಅಂಧರ ವಿಶ್ವಕಪ್ ಟೂರ್ನಿಯ ಸಿದ್ಧತೆಗಾಗಿ ಈ ಶಿಬಿರ ಆಯೋಜಿಸಲಾಗು ತ್ತಿದೆ. 56 ಆಟಗಾರರು ಶಿಬಿ ರದಲ್ಲಿ ಪಾಲ್ಗೊಂಡಿದ್ದು, ಬಳಿಕ ಅಂತಿಮವಾಗಿ 29 ಆಟಗಾರರನ್ನು ಆಯ್ಕೆ ಮಾಡಲಾಗುತ್ತದೆ. ಈ ಆಟಗಾರರಿಗೆ ತರಬೇತಿಯ ಜತೆಗೆ ಡಿಜಿಟಲ್, ತಾಂತ್ರಿಕತೆ ಹಾಗೂ ಹಣಕಾಸಿನ ವ್ಯವಹಾರದ ಕುರಿತು ಮಾಹಿತಿ ನೀಡಲಾಗುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.