: ಮಾಜಿ ಕೋಚ್ ರವಿ ಶಾಸ್ತ್ರಿಗೆ ಶಾಂಪೇನ್ ಉಡುಗೊರೆಯಾಗಿ ನೀಡಿದ ಪಂತ್ ಮ್ಯಾಂಚೆಸ್ಟರ್: ಆಂಗ್ಲರ ನಾಡಿನಲ್ಲಿ ಭಾರತ ಕ್ರಿಕೆಟ್ ತಂಡವು ಮಗದೊಂದು ಸ್ಮರಣೀಯ ಏಕದಿನ ಸರಣಿ ಗೆಲುವು ದಾಖಲಿಸಿದೆ. ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಐದು ವಿಕೆಟ್ ಅಂತರದ ಗೆಲುವು ದಾಖಲಿಸಿದ ಟೀಮ್ ಇಂಡಿಯಾ ಸರಣಿಯನ್ನು 2-1ರ ಅಂತರದಲ್ಲಿ ತನ್ನದಾಗಿಸಿಕೊಂಡಿದೆ. ಇದನ್ನೂ ಓದಿ:50 ರನ್ ಹಾಗೂ 4 ವಿಕೆಟ್: ಹಾರ್ದಿಕ್ ಪಾಂಡ್ಯ ವಿಶಿಷ್ಟ ಸಾಧನೆ ಏಕದಿನದಲ್ಲಿ ಚೊಚ್ಚಲ ಶತಕ ಗಳಿಸಿದ ರಿಷಭ್ ಪಂತ್ ಮತ್ತು ಪಂದ್ಯದಲ್ಲಿ ಅರ್ಧಶತಕ ಹಾಗೂ ನಾಲ್ಕು ವಿಕೆಟ್ ಕಬಳಿಸಿದ ಹಾರ್ದಿಕ್ ಪಾಂಡ್ಯ ಗೆಲುವಿನ ರೂವಾರಿ ಎನಿಸಿದರು. ಇವರಿಬ್ಬರು ಐದನೇವಿಕೆಟ್‌ಗೆ ಶತಕದ ಜೊತೆಯಾಟದಲ್ಲಿ ಭಾಗಿಯಾದರು. 🏆🇮🇳 ../iYu3JSsI5j ಗೆಲುವಿನ ಬಳಿಕ ಭಾರತದ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಪ್ರಶಸ್ತಿ ಪ್ರದಾನ ಸಮಾರಂಭದ ಕೊನೆಯಲ್ಲಿ ನಾಯಕ ರೋಹಿತ್ ಶರ್ಮಾ ಟ್ರೋಫಿ ಎತ್ತಿ ಹಿಡಿಯುತ್ತಿದ್ದಂತೆಯೇ ಶಾಂಪೇನ್ ಚಿಮ್ಮಿಸಿದ ತಂಡದ ಆಟಗಾರರು ಸ್ಮರಣೀಯ ಸಾಧನೆಯ ಆನಂದದಾಯಕ ಕ್ಷಣವನ್ನು ಆಚರಿಸಿಕೊಂಡರು. ಈ ನಡುವೆ ಮಾಜಿ ಕೋಚ್ ರವಿ ಶಾಸ್ತ್ರಿ ಬಳಿ ತೆರಳಿದ ರಿಷಭ್ ಪಂತ್, ಪಂದ್ಯಶ್ರೇಷ್ಠ ಪ್ರಶಸ್ತಿಯಾಗಿದೊರಕಿದ ಶಾಂಪೇನ್ ಬಾಟಲಿಯನ್ನು ಉಡುಗೊರೆಯಾಗಿ ನೀಡಿದರು. ಇದನ್ನು ರವಿಶಾಸ್ತ್ರಿ ಸಂತೋಷದಿಂದಲೇ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಗ್ಯಾಲರಿಯಲ್ಲಿದ್ದ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ' . # # # # # # # #../CM2etKXT2B ಈ ಮೊದಲು ಮಾಜಿ ನಾಯಕ ವಿರಾಟ್ ಕೊಹ್ಲಿ ಸಹ ರವಿ ಶಾಸ್ತ್ರಿಗೆ ಶಾಂಪೇನ್ ಬಾಟಲಿ ಆಫರ್ ಮಾಡುತ್ತಿರುವ ಚಿತ್ರವೂ ವೈರಲ್ ಆಗಿದೆ. ಭಾರತ-ಇಂಗ್ಲೆಂಡ್ ಸರಣಿಯಲ್ಲಿ ರವಿ ಶಾಸ್ತ್ರಿ ವೀಕ್ಷಕ ವಿವರಣೆಗಾರನಾಗಿ ಕೆಲಸನಿಭಾಯಿಸಿದ್ದರು. . ../vchQCOH8Zv 🔥 ../dE1Xgx81w4 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.