: ಎರಡನೇ ಟೆಸ್ಟ್ ಪಂದ್ಯ ವಿಳಂಬ– ರಹಾನೆ, ಜಡೇಜಾ, ಇಶಾಂತ್ ಅಲಭ್ಯ ಮುಂಬೈ: ರಾತ್ರಿಯಿಡೀ ಮಳೆ ಸುರಿದಿರುವುದರಿಂದ ವಾಖೆಂಡೆ ಕ್ರೀಡಾಂಗಣದಲ್ಲಿ ಬೆಳಗ್ಗೆ ಆರಂಭವಾಗಬೇಕಿದ್ದ ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯ ವಿಳಂಬವಾಗಿದೆ. 11.30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದ್ದು, ಮಧ್ಯಾಹ್ನ 12 ಗಂಟೆಗೆ ಪಂದ್ಯ ಆರಂಭವಾಗಲಿದೆ ಎಂದು ಬಿಸಿಸಿಐ ಟ್ವೀಟ್ ಮೂಲಕ ತಿಳಿಸಿದೆ. - 11.30 . 12 . 78 .# @ ../c324ZF03ge ಪಂದ್ಯ ವಿಳಂಬವಾದ ಕಾರಣ ಇಂದು 78 ಓವರ್‌ ಬೌಲಿಂಗ್‌ ಮಾಡಲು ಮಾತ್ರ ಅವಕಾಶ ನೀಡಲಾಗಿದೆ ಎಂದು ಅದು ತಿಳಿಸಿದೆ. ಈ ಮಧ್ಯೆ, ಪಂದ್ಯ ಆರಂಭಕ್ಕೂ ಮುನ್ನ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳಿಗೆ ಗಾಯಾಳುಗಳ ಸಮಸ್ಯೆ ಕಾಡಿದೆ. ಭಾರತ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ ಮತ್ತು ಇಶಾಂತ್ ಶರ್ಮಾ ಗಾಯಾಳು ಪಟ್ಟಿಗೆ ಸೇರಿದ್ದು, ಪಂದ್ಯದಿಂದ ಹೊರಗುಳಿದಿದ್ದಾರೆ ಎಂದು ಬಿಸಿಸಿಐ ಟ್ವೀಟ್ ಮಾಡಿದೆ. ನ್ಯೂಜಿಲೆಂಡ್ ನಾಯಕ ಕೇನ್ ಮಿಲಿಯಮ್‌ಸನ್ ಗಾಯಗೊಂಡು ಪಂದ್ಯಕ್ಕೆ ಅಲಭ್ಯರಾಗಿದ್ದಾರೆ ಎಂದು ಕ್ರಿಕ್ ಇನ್ಫೋ ವರದಿ ಮಾಡಿದೆ. - – ’ , 2nd . - ://./ui9RXK1Vux # ../qdWDPp0MIz ಕಾನ್ಪುರ ಟೆಸ್ಟ್ ಪಂದ್ಯದ ಕೊನೆಯ ದಿನ ಫೀಲ್ಡಿಂಗ್ ವೇಳೆ ಅಜಿಂಕ್ಯ ರಹಾನೆ ಅವರ ಮಣಿಕಟ್ಟಿಗೆ ಸಣ್ಣ ಪ್ರಮಾಣದ ಗಾಯವಾಗಿತ್ತು. ಜಡೇಜಾ ಸಹ ಬಲಗೈಗೆ ಗಾಯ ಮಾಡಿಕೊಂಡಿದ್ದು, ಸ್ಕ್ಯಾನಿಂಗ್‌ನಲ್ಲಿ ಊತ ಕಂಡು ಬಂದಿದೆ. ಹೀಗಾಗಿ, ಸದ್ಯ ವಿಶ್ರಾಂತಿಗೆ ಬಿಸಿಸಿಐ ಸಲಹೆ ನೀಡಿದೆ. ಇಶಾಂತ್ ಶರ್ಮಾ ಅವರ ಎಡಗೈನ ಕಿರು ಬೆರಳು ಉಳುಕಿದ್ದು, ಅವರ ಬದಲಿಗೆ ಮೊಹಮ್ಮದ್ ಸಿರಾಜ್ ಕಣಕ್ಕಿಳಿಯಲಿದ್ದಾರೆ. ಟಿ–20 ಸರಣಿಯಲ್ಲಿ ಬೆರಳಿಗೆ ಗಾಯಮಾಡಿಕೊಂಡಿದ್ದ ಸಿರಾಜ್ ಬಳಿಕ ಚೇತರಿಸಿಕೊಂಡಿದ್ದಾರೆ. ವಿಲಿಯಮ್ಸನ್‌ ಅವರಿಗೆ ಎಡ ಮೊಣಕೈನ ಹಳೆಯ ನೋವು ಮತ್ತೆ ಕಾಣಿಸಿಕೊಂಡಿದೆ. ಅದು ವರ್ಷಪೂರ್ತಿ ಅವರನ್ನು ಕಾಡಿದೆ ಎಂದು ತರಬೇತುದಾರ ಗ್ಯಾರಿ ಸ್ಟೆಡ್ ಹೇಳಿದ್ಧಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.