ಕ್ರಿಕೆಟ್‌: ಬೆಳಗಾವಿ ತಂಡಕ್ಕೆ ಗೆಲುವು ಹುಬ್ಬಳ್ಳಿ: ಬೆಳಗಾವಿ ಸ್ಪೋರ್ಟ್ಸ್‌ ಕ್ಲಬ್‌ ‘ಎ’ ತಂಡ, ಕೆಎಸ್‌ಸಿಎ ಧಾರವಾಡ ವಲಯ ಆಯೋಜಿಸಿರುವ ಮೊದಲ ಡಿವಿಷನ್‌ ಕ್ರಿಕೆಟ್‌ ಟೂರ್ನಿಯ ಭಾನುವಾರದ ಪಂದ್ಯದಲ್ಲಿ 7 ವಿಕೆಟ್‌ಗಳ ಜಯ ಸಾಧಿಸಿತು. ಇಲ್ಲಿನ ರಾಜನಗರದ ಕೆಎಸ್‌ಸಿಎ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹುಬ್ಬಳ್ಳಿ ಕ್ರಿಕೆಟ್ ಅಕಾಡೆಮಿ 217 ರನ್‌ ಗಳಿಸಿತ್ತು. ಈ ಗುರಿಯನ್ನು ಬೆಳಗಾವಿಯ ತಂಡ ಶಿವಂ ಎನ್‌. (ಅಜೇಯ 103) ಶತಕದ ಬಲದಿಂದ ಸುಲಭವಾಗಿ ತಲುಪಿತು. ಮತ್ತೊಂದು ಪಂದ್ಯದಲ್ಲಿ ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್‌ (ಎಚ್‌ಎಸ್‌ಸಿ) ’ಬಿ’ ತಂಡ 50 ಓವರ್‌ಗಳಲ್ಲಿ 284 ರನ್‌ ಗಳಿಸಿತ್ತು. ಎದುರಾಳಿ ಧಾರವಾಡದ ಸಿಸಿಕೆ ‘ಎ’ ತಂಡ 49.3 ಓವರ್‌ಗಳಲ್ಲಿ 266 ರನ್‌ ಗಳಿಸಿ ಗೆಲುವಿನ ಸನಿಹ ಬಂದು ನಿರಾಸೆ ಕಂಡಿತು. ಎಚ್‌ಎಸ್‌ಸಿ 19 ರನ್ ಗೆಲುವು ಸಾಧಿಸಿತು. ಮತ್ತೊಂದು ಪಂದ್ಯದಲ್ಲಿ ಎಸ್‌ಡಿಎಂ ಕ್ರಿಕೆಟ್‌ ಅಕಾಡೆಮಿ ‘ಬಿ’ ತಂಡ 40.4 ಓವರ್‌ಗಳಲ್ಲಿ 168 ರನ್‌ ಗಳಿಸಿತ್ತು. ಎದುರಾಳಿ ಎಸ್‌ಡಿಎಂ ‘ಎ’ ತಂಡ 35.1 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು. ಇನ್ನೊಂದು ಹೋರಾಟದಲ್ಲಿ ಬೆಳಗಾವಿಯ ದ ಯೂನಿಯನ್‌ ಜಿಮ್ಖಾನಾ ಲಿಮಿಟೆಡ್‌ ಎದುರು ಬೆಳಗಾವಿ ಸ್ಪೋರ್ಟ್ಸ್‌ ಕ್ಲಬ್‌ ‘ಬಿ’ ವಿರುದ್ಧ 88 ರನ್‌ ಗೆಲುವು ದಾಖಲಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.