ಕೂಚ್‌ ಬೆಹಾರ್ ಟ್ರೋಫಿ ಕ್ರಿಕೆಟ್‌ ಟೂರ್ನಿ: ವಿಶಾಲ್‌ ಕೈತಪ್ಪಿದ ತ್ರಿಶತಕ ಬೆಂಗಳೂರು: ವಿಶಾಲ್ ಒನಟ್‌ (290, 403ಎ, 42 ಬೌಂಡರಿ, 2 ಸಿಕ್ಸರ್‌) ಅವರು ಕೇವಲ 10 ರನ್‌ಗಳಿಂದ ತ್ರಿಶತಕ ತಪ್ಪಿಸಿಕೊಂಡರು. ಅವರು ಹಾಗೂ ಚಿನ್ಮಯ್‌ ಎನ್‌.ಎ. (167) ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ತಂಡವು 19 ವರ್ಷದೊಳಗಿನವರ ಕೂಚ್‌ ಬೆಹಾರ್ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಬೃಹತ್ ಮೊತ್ತ ಪೇರಿಸಿತು. ಆಂಧ್ರಪ್ರದೇಶದ ವಿಜಯನಗರಂನಲ್ಲಿ ಬರೋಡಾ ಎದುರು ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಬುಧವಾರ ಕರ್ನಾಟಕ 6 ವಿಕೆಟ್‌ ಕಳೆದುಕೊಂಡು 607 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತು. ಮೊದಲ ಇನಿಂಗ್ಸ್ ಆರಂಭಿಸಿರುವ ಬರೋಡಾ 8 ವಿಕೆಟ್‌ಗೆ 315 ರನ್‌ ಗಳಿಸಿದೆ. ಭವಿಷ್ಯ ಭಾವೇಶ ಪಟೇಲ್‌ ಶತಕ (100) ತಂಡಕ್ಕೆ ನೆರವಾದರು. ಸಂಕ್ಷಿಪ್ತ ಸ್ಕೋರು ಕರ್ನಾಟಕ ಮೊದಲ ಇನಿಂಗ್ಸ್: 133.4 ಓವರ್‌ಗಳಲ್ಲಿ 6ಕ್ಕೆ 607 (ವಿಶಾಲ್‌ ಓನಟ್‌ 290, ಚಿನ್ಮಯ್ ಎನ್.ಎ. 167, ಯಶೋವರ್ಧನ್ ಪರಂತಾಪ್‌ 39; ಕರಣ್‌ ಉಮತ್ತ್ 157ಕ್ಕೆ 4). ಬರೋಡಾ: 135 ಓವರ್‌ಗಳಲ್ಲಿ 8ಕ್ಕೆ 315 (ಭವಿಷ್ಯ ಭಾವೇಶ ಪಟೇಲ್‌ 100; ಪ್ರಿಯಾಂಶು ಮೋಲಿಯಾ 33, ತಸ್ಮಯ್‌ ಬೆಡಾಡೆ 39, ಯತಾರ್ಥ ಗುಂಚಾಲ 44; ಯಶೋವರ್ಧನ್ ಪರಂತಾಪ್‌ 25ಕ್ಕೆ2, ಶಶಿಕುಮಾರ್‌ ಕೆ.82ಕ್ಕೆ 3). ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.