ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ: ವೇಳಾಪಟ್ಟಿ ಸಮಿತಿಗೆ ರಘುರಾಮ್ ಭಟ್ ನವದೆಹಲಿ (ಪಿಟಿಐ): ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಪ್ರವಾಸ, ವೇಳಾಪಟ್ಟಿ ಮತ್ತು ತಾಂತ್ರಿಕ ಸಮಿತಿಯಲ್ಲಿ ಮಾಜಿ ಕ್ರಿಕೆಟಿಗ, ಕನ್ನಡಿಗ ರಘುರಾಮ್ ಭಟ್ ಅವರನ್ನು ಆಯ್ಕೆ ಮಾಡಲಾಗಿದೆ. ಶನಿವಾರ ಪ್ರಕಟಿಸಲಾಗಿರುವ ಅಂಪೈರ್ ಉಪಸಮಿತಿಯಲ್ಲಿ ಮಾಜಿ ಅಂತರರಾಷ್ಟ್ರೀಯ ಅಂಪೈರ್‌ಗಳಾದ ಸುಧೀರ್ ಅಸ್ನಾನಿ, ಅಮೀಶ್ ಸಾಹೆಬಾ ಮತ್ತು ಕೃಷ್ಣ ಹರಿಹರನ್ ನೇಮಕವಾಗಿದ್ದಾರೆ. ಇದೇ ಮೊದಲ ಬಾರಿಗೆ ರಚಿಸಲಾಗಿರುವ ಅಂಗವಿಕಲರ ಕ್ರಿಕೆಟ್ ಸಮಿತಿಗೆ ಕರ್ನಾಟಕದ ಮಹಾಂತೇಶ್ ಕಿವಡಸಣ್ಣವರ ಸೇರಿದಂತೆ ಮೂವರು ಆಯ್ಕೆಯಾಗಿದ್ದಾರೆ. ಪ್ರವಾಸ, ವೇಳಾಪಟ್ಟಿ–ತಾಂತ್ರಿಕ ಸಮಿತಿ: ರಘುರಾಮ್ ಭಟ್, ಅಮಿತಾಭ್ ವಿಜಯವರ್ಗಿಯಾ,, ಜಯೇಂದ್ರ ಸೆಹಗಲ್, ಪ್ರಬೀರ್ ಚಕ್ರವರ್ತಿ, ಹರಿನಾರಾಯಣ ಪೂಜಾರಿ ಸೀನಿಯರ್ ಟೂರ್ನಮೆಂಟ್ ಸಮಿತಿ: ವಿಶಾಲ್ ಜಗೋಟಾ, ವಿಕಾಸ್ ಕಟ್ಯಾಲ್, ರಾಜೇಶ್ ಗಾರ್ಸೊಂದಿಯಾ, ಸುರೇಂದ್ರ ಶೆವಳೆ, ಲಾಲ್‌ರೊಥುಮಾ. ಅಂಪೈರ್ ಸಮಿತಿ: ಅಮೀಶ್ ಸಾಹೆಬಾ, ಕೃಷ್ಣ ಹರಿಹರನ್, ಸುಧೀರ್ ಅಸ್ನಾನಿ ಅಂಗವಿಕಲರ ಕ್ರಿಕೆಟ್ ಸಮಿತಿ: ಮಹಾಂತೇಶ ಕಿವಡಸಣ್ಣವರ್, ರವಿಕಾಂತ್ ಚೌಹಾಣ, ಸುಮಿತ್ ಜೈನ್. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.