ಮಳೆಯಿಂದ ಕ್ರೀಡಾಂಗಣ ರಕ್ಷಿಸಲು ಸಿಬ್ಬಂದಿ ಜೊತೆ ಕೈಜೋಡಿಸಿದ ಮಹಿಳಾ ಕ್ರಿಕೆಟಿಗರು ಮೆಲ್ಬರ್ನ್: ಮಳೆಯಿಂದ ಕ್ರೀಡಾಂಗಣವನ್ನು ರಕ್ಷಿಸಲು ಸಿಬ್ಬಂದಿ ಜೊತೆ ಮಹಿಳಾ ಕ್ರಿಕೆಟಿಗರು ಕೈಜೋಡಿಸುವ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಮೆಲ್ಬರ್ನ್‌ನಲ್ಲಿ ಭಾನುವಾರ ವಿಕ್ಟೋರಿಯಾ ವುಮೆನ್‌ ಮತ್ತು ನ್ಯೂ ಸೌತ್‌ ವೇಲ್ಸ್‌ ತಂಡಗಳ ನಡುವಣ ರಾಷ್ಟ್ರೀಯ ಕ್ರಿಕೆಟ್‌ ಪಂದ್ಯದಲ್ಲಿ ಆಟಗಾರ್ತಿಯರು ಸಿಬ್ಬಂದಿಗೆ ಸಹಾಸಹಸ್ತ ಚಾಚಿದ್ದಾರೆ. 'ವಿಕ್ಟೋರಿಯಾ ಕ್ರಿಕೆಟ್‌ ಟೀಮ್'ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದ್ದು, ಆಟಗಾರ್ತಿಯರ ಸೇವಾಮನೋಭಾವಕ್ಕೆ ಹೆಚ್ಚಿನ ಮಂದಿ ಮೆಚ್ಚುಗೆ ಸೂಚಿಸಿದ್ದಾರೆ. ಪಂದ್ಯ ನಡೆಯುತ್ತಿದ್ದಾಗ ಮಳೆ ಬಂದಿದೆ. ಸಿಬ್ಬಂದಿ ಮೈದಾನವನ್ನು ಮುಚ್ಚಲು ಟರ್ಪಲ್‌ಗಳನ್ನು ಹಾಸಲು ಪ್ರಯತ್ನಿಸುತ್ತಿದ್ದಾಗ ಓಡಿ ಬರುವ ಆಟಗಾರ್ತಿಯರು ಸಹಾಯ ಮಾಡುತ್ತಿರುವುದು ವಿಡಿಯೊದಲ್ಲಿದೆ. ಪಂದ್ಯದಲ್ಲಿ ನ್ಯೂ ಸೌತ್‌ ವೇಲ್ಸ್‌ ತಂಡ ವಿಕ್ಟೋರಿಯಾ ವುಮೆನ್‌ ತಂಡವನ್ನು 5 ವಿಕೆಟ್‌ಗಳಿಂದ ಪರಾಭವಗೊಳಿಸಿದೆ. ಮಂಗ ನಾಯಿ: ಸಾಮಾಜಿಕ ಜಾಲತಾಣಗಳಲ್ಲಿ ಏನಿದು ಗ್ಯಾಂಗ್‌ ವಾರ್‌! 💨 ! 🌧 # ../e00U7hhQOp ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.