ಬಾಲಕಿ ಅಪಹರಣ ಪ್ರಕರಣ: ಪಾಕ್‌ ಕ್ರಿಕೆಟಿಗ ಯಾಸಿರ್‌ ಶಾ ವಿರುದ್ಧ ಎಫ್‌ಐಆರ್‌ ಇಸ್ಲಾಮಾಬಾದ್‌: ಪಾಕಿಸ್ತಾನ ಕ್ರಿಕೆಟ್‌ ತಂಡದ ಲೆಗ್‌ಸ್ಪಿನ್ನರ್ ಯಾಸಿರ್ ಶಾ ಮತ್ತು ಆತನಸ್ನೇಹಿತನವಿರುದ್ಧ ಪಾಕ್‌ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಬಾಲಕಿಯ ಅಪಹರಣ, ಕಿರುಕುಳ ಹಾಗೂ ಬೆದರಿಕೆ ಆರೋಪದಡಿಯಲ್ಲಿ ಲಾಹೋರ್‌ನ ಶಾಲಿಮಾಲ್‌ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ‘ಯಾಸಿರ್‌ ಶಾ ಸ್ನೇಹಿತ ಫರ್ಹಾನ್‌ ನನಗೆ ಪಿಸ್ತೂಲ್‌ ತೋರಿಸಿ ಅಪಹರಿಸಿ ಅತ್ಯಾಚಾರ ಮಾಡಿದ್ದಾನೆ, ಅಲ್ಲದೇ ಅತ್ಯಾಚಾರದ ದೃಶ್ಯವನ್ನು ವಿಡಿಯೊ ಮಾಡಿದ್ದಾನೆ’ ಎಂದು ಸಂತ್ರಸ್ತ ಬಾಲಕಿ ದೂರಿನಲ್ಲಿ ತಿಳಿಸಿದ್ದಾರೆ. ಅತ್ಯಾಚಾರದ ವಿಷಯವನ್ನು ಯಾರಿಗಾದರೂ ತಿಳಿಸಿದರೆ, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಶೇರ್‌ ಮಾಡಲಾಗವುದು ಎಂದು ಬೆದರಿಕೆ ಹಾಕಿದ್ದಾನೆ. ಈ ಕೃತ್ಯಕ್ಕೆಯಾಸಿರ್‌ ಶಾ ನೆರವು ನೀಡಿದ್ದಾನೆ ಎಂದು ಬಾಲಕಿ ಆರೋಪಿಸಿದ್ದಾರೆ. ನಾನು ಯಾಸಿರ್‌ ಶಾ ಅವರನ್ನು ವಾಟ್ಸ್ಆ್ಯಪ್‌ ಕಾಲ್‌ನಲ್ಲಿ ಸಂಪರ್ಕಿಸಿ ಸಹಾಯ ಮಾಡುವಂತೆ ಬೇಡಿಕೊಂಡೆ, ಅವರು ಯಾರಿಗೂ ವಿಷಯ ತಿಳಿಸಬೇಡ, ನಿನಗೆ ಒಂದು ಫ್ಲ್ಯಾಟ್‌ ಹಾಗೂ 18 ವರ್ಷಗಳ ಕಾಲ ಪ್ರತಿ ತಿಂಗಳು ಖರ್ಚಿಗೆ ಹಣ ಕೊಡುವುದಾಗಿ ಹೇಳಿದರು ಎಂದು ಬಾಲಕಿ ಆರೋಪಿಸಿದ್ದಾರೆ. 35 ವರ್ಷದ ಯಾಸಿರ್ ಶಾ ಪಾಕಿಸ್ತಾನದ ದಿಗ್ಗಜ ಸ್ಪಿನ್ನರ್‌ಗಳಲ್ಲಿ ಒಬ್ಬರು. ಇವರು46 ಟೆಸ್ಟ್‌ಗಳಲ್ಲಿ 235 ವಿಕೆಟ್‌ಗಳನ್ನು ಪಡೆದಿದ್ದಾರೆ. ಹಾಗೇ 25 ಏಕದಿನ ಪಂದ್ಯಗಳಲ್ಲಿ 24 ವಿಕೆಟ್ ಪಡೆದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.