ಮುಂದಿನ ಮೂರು ದಿನಗಳ ಗುಣಮಟ್ಟದ ತರಬೇತಿ ನಿರ್ಣಾಯಕ: ದ್ರಾವಿಡ್ ಸೆಂಚುರಿಯನ್: ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಆಟಗಾರರಿಗೆ ಮುಂದಿನ ಮೂರು ದಿನಗಳ ಗುಣಮಟ್ಟದ ತರಬೇತಿ ನಿರ್ಣಾಯಕವಾಗಿರಲಿದೆ ಎಂದು ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ತಿಳಿಸಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸ ಬೆಳೆಸಿರುವ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾವು ಆರಂಭದಲ್ಲಿ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗವಹಿಸಲಿದೆ. ಡಿಸೆಂಬರ್ 26ರಂದು ಸೆಂಚುರಿಯನ್‌ನಲ್ಲಿ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. \ ಇದನ್ನೂ ಓದಿ:ಬಾಬರ್‌ನಂತಹ ಆಟಗಾರನಿಲ್ಲವೆಂಬ ಕೊರಗು ಭಾರತಕ್ಕೂ ಕಾಡಲಿದೆ: ಪಾಕ್ ಮಾಜಿ ನಾಯಕ ಈ ನಡುವೆ ಗುಣಮಟ್ಟದ ತರಬೇತಿಯ ಅಗತ್ಯದ ಬಗ್ಗೆ ಕೋಚ್ ದ್ರಾವಿಡ್ ಪ್ರತಿಪಾದಿಸಿದ್ದಾರೆ.'ಮೊದಲ ಟೆಸ್ಟ್ ಪಂದ್ಯಕ್ಕೆ ಸಿದ್ದರಾಗುವ ನಿಟ್ಟಿನಲ್ಲಿ ಮುಂದಿನ ಮೂರು ದಿನಗಳ ಗುಣಮಟ್ಟದ ತರಬೇತಿಯು ಅತಿ ಮುಖ್ಯವೆನಿಸುತ್ತದೆ' ಎಂದು ಹೇಳಿದ್ದಾರೆ. # 💪🏻 🏟️ # . ' @28anand . 👍 👍 🎥 🔽://./Dm6hVDz71w ../ ತಂಡದ ಎಲ್ಲ ಆಟಗಾರರು ಕಠಿಣ ತರಬೇತಿಯಲ್ಲಿ ಭಾಗವಹಿಸಿದ್ದಾರೆ. ಈ ಸಂದರ್ಭದಲ್ಲಿ ನಾಯಕ ವಿರಾಟ್ ಕೊಹ್ಲಿ ಅವರಿಗೂ ದ್ರಾವಿಡ್ ಸಲಹೆ ನೀಡುತ್ತಿರುವ ದೃಶ್ಯ ಕಂಡುಬಂತು. ಗಾಯದ ಸಮಸ್ಯೆಯಿಂದಾಗಿ ರೋಹಿತ್ ಶರ್ಮಾ ಟೆಸ್ಟ್ ಸರಣಿಗೆ ಅಲಭ್ಯರಾಗಿದ್ದಾರೆ. ಬಳಿಕ ನಡೆಯಲಿರುವ ಏಕದಿನ ಸರಣಿಯ ವೇಳೆ ತಂಡವನ್ನು ಮುನ್ನಡೆಸಲಿದ್ದಾರೆ. 🏟️ 1st 💪🏻💥# | # ../ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.