ರಾಜಕೀಯದ ಮೂಲಕ ಪಂಜಾಬ್‌ಗೆ ಸೇವೆ ಸಲ್ಲಿಸುತ್ತೇನೆ: ಹರಭಜನ್‌ ಸಿಂಗ್ ನವದೆಹಲಿ: ರಾಜಕೀಯದ ಮೂಲಕ ಪಂಜಾಬ್‌ಗೆ ಸೇವೆ ಸಲ್ಲಿಸುತ್ತೇನೆ ಎಂದು ಮಾಜಿ ಕ್ರಿಕೆಟಿಗಹರಭಜನ್ ಸಿಂಗ್‌ ತಿಳಿಸಿದ್ದಾರೆ. ಈ ಕುರಿತು ಸುದ್ದಿಸಂಸ್ಥೆ ‘ಎಎನ್‌ಐ’ ಟ್ವೀಟ್‌ ಮಾಡಿದೆ. ಪಂಜಾಬ್‌ ಚುನಾವಣೆಗೆ ಮುಂಚಿತವಾಗಿ ಹರಭಜನ್‌ ಸಿಂಗ್ ಅವರು ಕಾಂಗ್ರೆಸ್‌ ಪಕ್ಷಕ್ಕೆ ಸೇರಲಿದ್ದಾರೆ ಎಂಬ ಮಾತುಗಳುಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಮಾತನಾಡಿರುವ ಹರಭಜನ್‌ ಸಿಂಗ್‌, ‘ನನಗೆ ಎಲ್ಲಾ ಪಕ್ಷದ ರಾಜಕಾರಣಿಗಳೂಗೊತ್ತು. ನಾನುರಾಜಕೀಯದ ಮೂಲಕ ಪಂಜಾಬ್‌ಗೆ ಸೇವೆ ಸಲ್ಲಿಸುತ್ತೇನೆ. ಆದರೆ, ಈ ವರೆಗೆಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ’ಎಂದು ಹೇಳಿದ್ದಾರೆ. ಹರಭಜನ್ ಸಿಂಗ್ ಅವರು ಎಲ್ಲ ಪ್ರಕಾರದ ಕ್ರಿಕೆಟ್‌ಗೆ ಶುಕ್ರವಾರನಿವೃತ್ತಿ ಘೋಷಿಸಿದ್ದಾರೆ. ಹರಭಜನ್ ಸಿಂಗ್ ಭಾರತ ತಂಡವನ್ನು 103 ಟೆಸ್ಟ್, 236 ಏಕದಿನ ಹಾಗೂ 28 ಟ್ವೆಂಟಿ-20 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. ಹಾಗೆಯೇ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) 163 ಪಂದ್ಯಗಳನ್ನು ಆಡಿದ್ದಾರೆ. . ' ' . , , : - ../TTOd5lSRNW ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.