ನಿಮ್ಮದು ಅದ್ಭುತ ವೃತ್ತಿ ಜೀವನ: ಹರಭಜನ್‌ ನಿವೃತ್ತಿ ಕುರಿತು ರೋಹಿತ್‌ ಟ್ವೀಟ್‌ ಮುಂಬೈ: ಕ್ರಿಕೆಟಿಗಹರಭಜನ್ ಸಿಂಗ್ ಅವರು ಎಲ್ಲ ಪ್ರಕಾರದ ಕ್ರಿಕೆಟ್‌ಗೆ ಶುಕ್ರವಾರನಿವೃತ್ತಿ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹರಭಜನ್‌ ಅವರ ಮುಂದಿನ ಪಯಣಕ್ಕೆಭಾರತ ಸೀಮಿತ ಓವರ್‌ಗಳ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಶುಭಾಶಯ ಕೋರಿದ್ದಾರೆ. ಹರಭಜನ್‌ ಸಿಂಗ್‌ರನ್ನುಹೊಗಳಿ ಶನಿವಾರ ಟ್ವೀಟ್‌ ಮಾಡಿರುವ ರೋಹಿತ್‌ ಶರ್ಮಾ,‘ಎಂತಹ ಸ್ಪರ್ಧಿ ನೀವು.ನಿಮ್ಮದು ಅದ್ಭುತವೃತ್ತಿ ಜೀವನವಾಗಿದೆ ಭಜ್ಜಿಪಾ.ಈಗ ನೀವು ಶ್ರೇಷ್ಠನಿವೃತ್ತಿಯನ್ನೂ ಹೊಂದಿದ್ದೀರಿ. ನಾನು ಖಂಡಿತವಾಗಿಯೂ ನಿಮ್ಮನ್ನು ಇನ್ನೊಂದು ಬದಿಯಲ್ಲಿ(ಹರಭಜನ್‌ ಅವರ ರಾಜಕೀಯ ಪ್ರವೇಶದ ಕುರಿತು)ನೋಡಲು ಇಷ್ಟಪಡುತ್ತೇನೆ’ ಎಂದು ತಿಳಿಸಿದ್ದಾರೆ. ಪಂಜಾಬ್‌ ಚುನಾವಣೆಗೆ ಮುಂಚಿತವಾಗಿ ಹರಭಜನ್‌ ಸಿಂಗ್ ಅವರು ರಾಜಕೀಯವನ್ನು ಪ್ರವೇಶಿಸಲಿದ್ದಾರೆಎಂಬ ಮಾತುಗಳುಕೇಳಿಬಂದಿವೆ. ಹರಭಜನ್ ಸಿಂಗ್ ಭಾರತ ತಂಡವನ್ನು 103 ಟೆಸ್ಟ್, 236 ಏಕದಿನ ಹಾಗೂ 28 ಟ್ವೆಂಟಿ-20 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. ಹಾಗೆಯೇ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) 163 ಪಂದ್ಯಗಳನ್ನು ಆಡಿದ್ದಾರೆ. !!! , . ’ 😉 @harbhajan_singh ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.