1st : ಎರಡನೇ ದಿನ ಮಳೆಯದ್ದೇ ಆಟ! ಸೆಂಚುರಿಯನ್: ಭಾರತ ಹಾಗೂ ಅತಿಥೇಯ ದಕ್ಷಿಣ ಆಫ್ರಿಕಾ ನಡುವಣ ಪ್ರಥಮ ಟೆಸ್ಟ್ ಪಂದ್ಯದ ಎರಡನೇ ದಿನದಾಟಕ್ಕೆ ಮಳೆ ಅಡಚಣೆಯಾಗಿದೆ. ಪರಿಣಾಮ ಒಂದೇ ಒಂದು ಎಸೆತವನ್ನು ಕಾಣದೇದಿನದಾಟವನ್ನು ರದ್ದುಗೊಳಿಸಲಾಗಿದೆ. ಮೊದಲ ದಿನದಾಟದ ಅಂತ್ಯಕ್ಕೆ ಭಾರತ ತಂಡವು 90 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 272 ರನ್ ಗಳಿಸಿತ್ತು. ಇದನ್ನೂ ಓದಿ: : ಕನ್ನಡಿಗ ರಾಹುಲ್ ‘ಸೆಂಚುರಿಯನ್‘ ಬೆಳಗಿನ ಜಾವದಿಂದಲೇ ಮಳೆ ಸುರಿದಿದ್ದರಿಂದ ದಿನದಾಟ ಆರಂಭವಾಗಲೇ ಇಲ್ಲ. ಇದರಿಂದಾಗಿ ಭೋಜನ ವಿರಾಮವನ್ನು ಬೇಗನೇ ತೆಗೆದುಕೊಳ್ಳಲಾಯಿತು. ಬಳಿಕ ಸ್ಥಳೀಯ ಕಾಲಮಾನ 1.30ಕ್ಕೆ ಮೈದಾನ ಪರಿಶೀಲಿಸಿದ ಅಂಪೈರ್‌ಗಳು, ದಿನದಾಟ ಸ್ಥಗಿತಗೊಳಿಸುವ ಘೋಷಣೆ ಮಾಡಿದರು. , , . # ../NQ5Jbc8MlJ ಸೆಂಚುರಿಯನ್‌ನ ಸೂಪರ್ ಸ್ಪೋರ್ಟ್ ಪಾರ್ಕ್ ಮೈದಾನದಲ್ಲಿ ಮೊದಲ ದಿನದಾಟದಲ್ಲಿ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದ ಕನ್ನಡಿಗ ಕೆ.ಎಲ್. ರಾಹುಲ್, ಟೆಸ್ಟ್ ವೃತ್ತಿ ಜೀವನದಲ್ಲಿ ಏಳನೇ ಶತಕ ಗಳಿಸಿದರು. 122 ರನ್ ಗಳಿಸಿರುವ ರಾಹುಲ್ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಅವರಿಗೆ ಸಾಥ್ ನೀಡುತ್ತಿರುವ ಅಜಿಂಕ್ಯ ರಹಾನೆ 40 ರನ್ ಗಳಿಸಿ ಔಟಾಗದೆ ಉಳಿದಿದ್ದಾರೆ. ಮಯಂಕ್ ಅಗರವಾಲ್ ಸಹ ಆಕರ್ಷಕ ಅರ್ಧಶತಕ (60) ಗಳಿಸಿದ್ದರು. '' @klrahul11 🚗 🗣️ 💯 🤜🤛 & 👍. # 1 1st # . 👏 - @28anand 🎥 🔽://./d2DooNWtrG ../Y0ONWu5vQ3 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.