ಜ.13ರಿಂದ ರಣಜಿ ಟ್ರೋಫಿ: ಕೋಲ್ಕತ್ತದಲ್ಲಿ ಕರ್ನಾಟಕ–ಉತ್ತರಾಖಂಡ ಮುಖಾಮುಖಿ ಬೆಂಗಳೂರು: ದೇಶಿ ಕ್ರಿಕೆಟ್‌ನ ರಾಜ ರಣಜಿ ಟ್ರೋಫಿ ಟೂರ್ನಿಯು ಜನವರಿ 13ರಿಂದ ಮಾರ್ಚ್ 20ರವರೆಗೆ ನಡೆಯಲಿದೆ.ಹೋದ ವರ್ಷ ಕೊರೊನಾ ಸೃಷ್ಟಿಸಿದ ಬಿಕ್ಕಟ್ಟಿನಿಂದಾಗಿ ರಣಜಿ ಟೂರ್ನಿಯನ್ನು ರದ್ದುಪಡಿಸಲಾಗಿತ್ತು. ಮುಂಬೈ, ಚೆನ್ನೈ, ಅಹಮದಾಬಾದ್, ಥಾಣೆ, ಬೆಂಗಳೂರು ಮತ್ತು ಕೋಲ್ಕತ್ತದಲ್ಲಿ ಗುಂಪು ಹಂತದ ಪಂದ್ಯಗಳು ನಡೆಯಲಿವೆ. ಕರ್ನಾಟಕ ತಂಡವು ಸಿ ಗುಂಪಿನಲ್ಲಿ ಕಣಕ್ಕಿಳಿಯಲಿದೆ. ಇದೇ ಗುಂಪಿನಲ್ಲಿ ಉತ್ತರಾಖಂಡ, ಹೈದರಾಬಾದ್, ಮಹಾರಾಷ್ಟ್ರ, ಮುಂಬೈ ಮತ್ತು ದೆಹಲಿ ತಂಡಗಳೂ ಇವೆ. ಈ ಗುಂಪಿನ ಪಂದ್ಯಗಳು ಕೋಲ್ಕತ್ತದಲ್ಲಿ ನಡೆಯಲಿವೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಒಟ್ಟು 38 ತಂಡಗಳು ಪೈಪೋಟಿ ನಡೆಸಲಿವೆ. 177 ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ.2019-20ರಲ್ಲಿ ಸೌರಾಷ್ಟ್ರ ಮತ್ತು ಬಂಗಾಳ ತಂಡಗಳು ಕ್ರಮವಾಗಿ ಚಾಂಪಿಯನ್ ಮತ್ತು ರನ್ನರ್ಸ್ ಅಪ್ ಆಗಿದ್ದವು. ಪಟ್ಟಿ ಕರ್ನಾಟಕದ ಪಂದ್ಯಗಳು (ಗುಂಪು ಹಂತ) ಆರಂಭ ದಿನಾಂಕ; ಎದುರಾಳಿ ಜ.13; ಉತ್ತರಾಖಂಡ ಜ.20; ಹೈದರಾಬಾದ್ ಜ. 27; ಮಹಾರಾಷ್ಟ್ರ ಫೆ 3; ಮುಂಬೈ ಫೆ 10; ದೆಹಲಿ * ಸ್ಥಳ: ಕೋಲ್ಕತ್ತ * ಸಮಯ: ಬೆಳಿಗ್ಗೆ 9.30 ಮಾಹಿತಿ: ಬಿಸಿಸಿಐ ಡಾಟ್ ಟಿವಿ ವೆಬ್‌ಸೈಟ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.