: ಭಾರತ 174ಕ್ಕೆ ಆಲೌಟ್; ದ.ಆಫ್ರಿಕಾ ಗೆಲುವಿಗೆ 305 ರನ್ ಗುರಿ ಸೆಂಚುರಿಯನ್: ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಭಾರತ ತಂಡವು ದ್ವಿತೀಯ ಇನ್ನಿಂಗ್ಸ್‌ನಲ್ಲಿ 50.3 ಓವರ್‌ಗಳಲ್ಲಿ ಕೇವಲ 174 ರನ್‌ಗಳಿಗೆ ಆಲೌಟ್ ಆಗಿದೆ. ಈ ಮೂಲಕ ದಕ್ಷಿಣ ಆಫ್ರಿಕಾದ ಗೆಲುವಿಗೆ 305 ರನ್‌ಗಳ ಗುರಿ ಒಡ್ಡಿದೆ. ತಾಜಾ ವರದಿಗಳ ವೇಳೆಗೆ ದಕ್ಷಿಣ ಆಫ್ರಿಕಾ, ಒಂದು ವಿಕೆಟ್ ನಷ್ಟಕ್ಕೆ 7 ರನ್ ಗಳಿಸಿದ್ದು, ಸಂಕಷ್ಟದಲ್ಲಿದೆ. 16/1 ಎಂಬ ಸ್ಕೋರ್‌ನಿಂದ ದಿನದಾಟ ಮುಂದುವರಿಸಿದ ಭಾರತಕ್ಕೆ ಕಗಿಸೊ ರಬಾಡ, ಮಾರ್ಕೊ ಜಾನ್ಸನ್ ಹಾಗೂ ಲುಂಗಿ ಗಿಡಿ ಮಾರಕವಾಗಿ ಕಾಡಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಗಳಿಸಿರುವ ಕೆ.ಎಲ್. ರಾಹುಲ್ 23 ರನ್ ಗಳಿಸಿ ಔಟ್ ಆದರು. ಚೇತೇಶ್ವರ ಪೂಜಾರ (16) ಹಾಗೂ ನಾಯಕ ವಿರಾಟ್ ಕೊಹ್ಲಿ (18) ಮಗದೊಮ್ಮೆ ವೈಫಲ್ಯ ಅನುಭವಿಸಿದರು. ' ' 174 . 305 . - ://./eoM8MqSQgO # ../ ಕೆಳ ಕ್ರಮಾಂಕದಲ್ಲಿ ರಿಷಭ್ ಪಂತ್ 34 ರನ್‌ಗಳ ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು. ಅಜಿಂಕ್ಯ ರಹಾನೆ (20) ಪ್ರಭಾವಿ ಎನಿಸಲಿಲ್ಲ. ದಕ್ಷಿಣ ಆಫ್ರಿಕಾದ ಪರ ರಬಾಡ ಹಾಗೂ ಜಾನ್ಸನ್ ತಲಾ ನಾಲ್ಕು ಮತ್ತು ಗಿಡಿ ಎರಡು ವಿಕೆಟ್ ಕಿತ್ತು ಮಿಂಚಿದರು. ಈ ಮೊದಲು ಭಾರತದ 327 ರನ್‌ಗಳಿಗೆ ಉತ್ತರವಾಗಿ ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್‌ನಲ್ಲಿ 197 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಭಾರತದ ಪರ ಮೊಹಮ್ಮದ್ ಶಮಿ ಐದು ವಿಕೆಟ್ ಕಿತ್ತು ಮಿಂಚಿದರು. ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ 130 ರನ್‌ಗಳ ಮಹತ್ವದ ಮುನ್ನಡೆ ಗಳಿಸಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಪರ ರಾಹುಲ್ ಆಕರ್ಷಕ ಶತಕ (123) ಸಾಧನೆ ಮಾಡಿದ್ದರು. ಮಳೆಯಿಂದಾಗಿ ದ್ವಿತೀಯ ದಿನದಾಟದ ಪಂದ್ಯ ರದ್ದುಗೊಂಡಿತ್ತು. ಮೂರನೇ ದಿನದಾಟದಲ್ಲಿ ಒಟ್ಟು 18 ವಿಕೆಟ್‌ಗಳು ಪತನಗೊಂಡಿದ್ದವು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.