ಮುಂಬೈ ರಣಜಿ ತಂಡಕ್ಕೆ ಪೃಥ್ವಿ ನಾಯಕ: ಅರ್ಜುನ್‌ಗೆ ಸ್ಥಾನ ಮುಂಬೈ (ಪಿಟಿಐ): ಆರಂಭಿಕ ಬ್ಯಾಟರ್ ಪೃಥ್ವಿ ಶಾ ಅವರು ರಣಜಿ ಟ್ರೋಫಿ ಟೂರ್ನಿಯಲ್ಲಿ ಆಡುವ ಮುಂಬೈ ತಂಡದ ನಾಯಕತ್ವ ವಹಿಸಲಿದ್ಧಾರೆ. 41 ಬಾರಿ ಚಾಂಪಿಯನ್ ಆಗಿರುವ ಮುಂಬೈ ಈ ಬಾರಿ ಸಿ ಗುಂಪಿನಲ್ಲಿ ಆಡಲಿದೆ. ಜನವರಿ 13ರಂದು ಮೊದಲ ಪಂದ್ಯದಲ್ಲಿ ಮಹಾರಾಷ್ಟ್ರ ತಂಡವನ್ನು ಎದುರಿಸಲಿದೆ. ಮುಂಬೈ ಕ್ರಿಕೆಟ್ ಸಂಸ್ಥೆಯು ಬುಧವಾರ 20 ಆಟಗಾರರ ತಂಡವನ್ನು ಪ್ರಕಟಿಸಿದೆ. ಅನುಭವಿ ಆಟಗಾರರಾದ ಶಿವಂ ದುಬೆ, ಸರ್ಫರಾಜ್ ಖಾನ್, ಅದಿತ್ಯ ತಾರೆ ಮತ್ತು ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ತಂಡದಲ್ಲಿದ್ದಾರೆ. ಸಲೀಲ್ ಅಂಕೋಲಾ ಮುಖ್ಯಸ್ಥರಾಗಿರುವ ಆಯ್ಕೆ ಸಮಿತಿಯು ತಂಡವನ್ನು ಆಯ್ಕೆ ಮಾಡಿದೆ. ಈ ಸಮಿತಿಯಲ್ಲಿ ಗುಲಾಮ್ ಪಾರ್ಕರ್, ಸುನಿಲ್ ಮೋರೆ, ಪ್ರಸಾದ್ ದೇಸಾಯಿ ಮತ್ತು ಆನಂದ್ ಯಲವಿಗಿ ಇದ್ದಾರೆ. ತಂಡ: ಪೃಥ್ವಿ ಶಾ (ನಾಯಕ), ಯಶಸ್ವಿ ಜೈಸ್ವಾಲ್, ಆಕರ್ಷಿತ್ ಗೊಮೆಲ್, ಅರ್ಮಾನ್ ಜಾಫರ್, ಸರ್ಫರಾಜ್ ಖಾನ್, ಸಚಿನ್ ಯಾದವ್, ಆದಿತ್ಯ ತಾರೆ (ವಿಕೆಟ್‌ಕೀಪರ್), ಹಾರ್ದಿಕ್ ತಮೊರೆ (ವಿಕೆಟ್‌ಕೀಪರ್), ಶಿವಂ ದುಬೆ, ಅಮನ್ ಖಾನ್, ಶಮ್ಸ್ ಮಲಾನಿ, ತನುಷ್ ಕೊಟ್ಯಾನ್, ಪ್ರಶಾಂತ್ ಸೋಳಂಕಿ, ಶಶಾಂಕ್ ಅತಾರ್ಡೆ, ಧವಳ್ ಕುಲಕರ್ಣಿ, ಮೋಹಿತ್ ಅವಸ್ತಿ, ಪ್ರಿನ್ಸ್ ಬದಿಯಾನಿ, ಸಿದ್ಧಾರ್ಥ್ ರಾವುತ್, ರಾಯಸ್ತಾನ್ ದಿಯಾಸ್, ಅರ್ಜುನ್ ತೆಂಡೂಲ್ಕರ್. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.