ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ ಕನ್ನಡ ಅನುಷ್ಠಾನಕ್ಕೆ ಸೂಚನೆ ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ (ಕೆಎಸ್‌ಸಿಎ) ಕನ್ನಡ ಅನುಷ್ಠಾನದ ಬಗ್ಗೆಬುಧವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ‘ಕಚೇರಿ ವ್ಯವಹಾರ ಸೇರಿದಂತೆ ಎಲ್ಲ ಹಂತದಲ್ಲಿಯೂ ಸಂಸ್ಥೆಯು ಕನ್ನಡ ಅನುಷ್ಠಾನ ಮಾಡಬೇಕು’ ಎಂದು ಸೂಚಿಸಿದೆ. ಸಂಸ್ಥೆಯು ಕನ್ನಡಅನುಷ್ಠಾನಗೊಳಿಸದ ಬಗ್ಗೆ ಪ್ರಾಧಿಕಾರಕ್ಕೆ ದೂರುಗಳು ಬಂದಿದ್ದವು. ಹೀಗಾಗಿ, ಪ್ರಾಧಿಕಾರದ ಅಧ್ಯಕ್ಷಟಿ.ಎಸ್. ನಾಗಾಭರಣ ನೇತೃತ್ವದ ನಿಯೋಗ ಸಂಸ್ಥೆಗೆ ಭೇಟಿ ನೀಡಿ,ಕೆಎಸ್‌ಸಿಎ ಪದಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿತು. ‘ಕರ್ನಾಟಕದಲ್ಲಿಕನ್ನಡವೇ ಸಾರ್ವಭೌಮ.ಆಡಳಿತ ಭಾಷೆಯಾದ ಕನ್ನಡದಲ್ಲಿಯೇ ಸಂಪೂರ್ಣ ವ್ಯವಹಾರ ನಡೆಯಬೇಕು. ಕಚೇರಿವ್ಯವಹಾರ,ಸಂಸ್ಥೆಯವೆಬ್‌ಸೈಟ್,ಸಾಮಾಜಿಕಜಾಲತಾಣ ಸೇರಿದಂತೆ ಎಲ್ಲೆಡೆ ಕನ್ನಡವನ್ನು ಅನುಷ್ಠಾನ ಮಾಡಬೇಕು. ಇಲ್ಲವಾದರೆ ನೋಟಿಸ್ ನೀಡಲಾಗುವುದು’ ಎಂದು ಎಚ್ಚರಿಕೆ ನೀಡಿದರು. ‘ಕೆಎಸ್‌ಸಿಎಬೈಲಾಹಾಗೂವಾರ್ಷಿಕಮಹಾಸಭೆಗಳನಿಯಮಾವಳಿಗಳೂ ಸಂಪೂರ್ಣಕನ್ನಡದಲ್ಲಿಇರಬೇಕು’ ಎಂದು ಸೂಚಿಸಿದರು. ‘ಸಂಸ್ಥೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಕನ್ನಡ ಅನುಷ್ಠಾನಗೊಳಿಸಲಾಗುವುದು. ಈ ಬಗ್ಗೆ ಅಗತ್ಯ ಕ್ರಮಕೈಗೊಳ್ಳುತ್ತೇವೆ’ ಎಂದುಕೆಎಸ್‌ಸಿಎ ಪದಾಧಿಕಾರಿಗಳು ಭರವಸೆ ನೀಡಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.