ಪಾಕಿಸ್ತಾನದ ವೇಗದ ಬೌಲರ್‌ ಹ್ಯಾರಿಸ್ ರೌಫ್‌ಗೆ ಧೋನಿ ನೀಡಿದ ಉಡುಗೊರೆ ಏನು? ನವದೆಹಲಿ: ಪಾಕಿಸ್ತಾನ ಕ್ರಿಕೆಟ್ ತಂಡದ ವೇಗದ ಬೌಲರ್ ಹ್ಯಾರಿಸ್ ರೌಫ್ ಅವರಿಗೆ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಟೀ-ಶರ್ಟ್ ಉಡುಗೊರೆಯಾಗಿ ನೀಡಿದ್ದಾರೆ. ಈ ಸಂತೋಷದ ವಿಷಯವನ್ನು ಸ್ವತಃ ಹ್ಯಾರಿಸ್ ರೌಫ್ ಅವರೇ ಟ್ವೀಟ್ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ:ಆ್ಯಷಸ್ | 2ನೇ ಇನಿಂಗ್ಸ್‌ನಲ್ಲೂಖ್ವಾಜಾ ಶತಕ:4ನೇ ಪಂದ್ಯವೂ ಆಸಿಸ್‌ ಹಿಡಿತದಲ್ಲಿ ಐಪಿಎಲ್‌ನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ ತಮ್ಮ ಸಿಎಸ್‌ಕೆ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. & @ . "7" & . @ . ../XYpSNKj2Ia ಕ್ರಿಕೆಟ್‌ನ ದಂತಕಥೆ, ಕ್ಯಾಪ್ಟನ್ ಕೂಲ್ ನನಗೆ ಸುಂದರವಾದ ಟೀ-ಶರ್ಟ್ ಉಡುಗೊರೆಯಾಗಿ ನೀಡಿ ಗೌರವಿಸಿದ್ದಾರೆ. '7' ಅಂಕಿ ಈಗಲೂ ಅವರ ಸದ್ಭಾವನಾ ಸಂದೇಶದಿಂದ ಹೃದಯವನ್ನು ಗೆಲ್ಲುತ್ತಿದೆ ಎಂದು ಹ್ಯಾರಿಸ್ ರೌಫ್ ಟ್ವೀಟ್ ಮಾಡಿದ್ದಾರೆ. ವೆಸ್ಟ್‌ಇಂಡೀಸ್‌ನ ಆಲ್‌ರೌಂಡರ್ ಆ್ಯಂಡ್ರೆ ರಸೆಲ್ ನೀಡಿರುವ ಬೆಂಬಲಕ್ಕೂ ರೌಫ್ ವಿಶೇಷ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಹ್ಯಾರಿಸ್ ರೌಫ್, ಅವರು ಮಹೇಂದ್ರ ಸಿಂಗ್ ಧೋನಿ ಅವರ ಕಟ್ಟಾ ಅಭಿಮಾನಿಯಾಗಿದ್ದಾರೆ. ಕಳೆದ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾರತವನ್ನು ಸೋಲಿಸಿದ ಪಾಕಿಸ್ತಾನ ತಂಡದ ಸದಸ್ಯರಾಗಿದ್ದರು. ಆ ವೇಳೆ ಧೋನಿ ಟೀಮ್ ಇಂಡಿಯಾದ ಮಾರ್ಗದರ್ಶಕರಾಗಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.