ಟೆಸ್ಟ್‌ ಕ್ರಿಕೆಟ್‌ನಲ್ಲೂ ನೋಬಾಲ್‌ಗೆ ಫ್ರೀ ಹಿಟ್ ಇರಲಿ: ಡೇಲ್ ಸ್ಟೇನ್ ಸಲಹೆ ನವದೆಹಲಿ (ಪಿಟಿಐ): ಟೆಸ್ಟ್ ಕ್ರಿಕೆಟ್‌ನಲ್ಲಿಯೂ ನೋಬಾಲ್‌ ಆದಾಗ ಫ್ರೀ ಹಿಟ್ ನೀಡುವ ನಿಯಮ ಬರಬೇಕು ಎಂದು ದಕ್ಷಿಣ ಆಫ್ರಿಕಾ ಮಾಜಿ ವೇಗದ ಬೌಲರ್ ಡೇಲ್ ಸ್ಟೇನ್ ಸಲಹೆ ನೀಡಿದ್ದಾರೆ. ‘ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಫ್ರೀ ಹಿಟ್ ನೀಡಲಾಗುತ್ತದೆ. ಅದೇ ರೀತಿಯಲ್ಲಿ ಟೆಸ್ಟ್‌ನಲ್ಲಿಯೂ ಕೊಡಬೇಕು. ಅದರಿಂದ ಬಾಲಂಗೋಚಿ ಬ್ಯಾಟರ್‌ಗಳಿಗೆ ಒಂದೊಮ್ಮೆ ನೋಬಾಲ್ ಗಳು ಸಿಕ್ಕರೆ ಈ ಫ್ರೀ ಹಿಟ್‌ಗಳ ಸದುಪಯೋಗ ಮಾಡಿಕೊಳ್ಳಲು ಅವಕಾಶ ಇರುತ್ತದೆ. ಅವರು ಹೆಚ್ಚು ಹೊತ್ತು ಬ್ಯಾಟ್ ಮಾಡಲು ಅನುಕೂಲವಾಗುತ್ತದೆ’ ಎಂದು ಸ್ಟೇನ್ ಅಭಿಪ್ರಾಯಪಟ್ಟಿದ್ದಾರೆ. ಬುಧವಾರ ಐದು ವಿಕೆಟ್ ಗಳಿಸಿದ ಭಾರತದ ಬೌಲರ್ ಜಸ್‌ಪ್ರೀತ್ ಬೂಮ್ರಾ ಅವರ ಸಾಧನೆಯನ್ನು ಶ್ಲಾಘಿಸಿರುವ ಸ್ಟೇನ್ ಟ್ವೀಟ್ ಮಾಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.