ಲೆಜೆಂಡ್ಸ್ ಲೀಗ್‌ ಕ್ರಿಕೆಟ್‌ಗೆ ಸಚಿನ್ ತೆಂಡೂಲ್ಕರ್ ಇಲ್ಲ ನವದೆಹಲಿ:ಭಾರತ ತಂಡದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಅವರು ಮುಂಬರುವ ಲೆಜೆಂಡ್ಸ್ ಲೀಗ್‌ ಕ್ರಿಕೆಟ್‌ (ಎಲ್‌ಎಲ್‌ಸಿ) ಟೂರ್ನಿಯಲ್ಲಿ ಆಡುವುದಿಲ್ಲ ಎಂದು ಎಸ್‌ಆರ್‌ಟಿ ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್‌ ಪ್ರೈವೇಟ್‌ ಲಿಮಿಟೆಡ್ ಸ್ಪಷ್ಟಪಡಿಸಿದೆ. ಎಲ್ಎಲ್‌ಸಿಯು ನಿವೃತ್ತ ಆಟಗಾರರು ಕಣಕ್ಕಿಳಿಯುವ ವೃತ್ತಿಪರ ಲೀಗ್ ಆಗಿದೆ. ಲೀಗ್‌ನಲ್ಲಿ ಆಡುವಭಾರತದ ಆಟಗಾರರ ತಂಡವನ್ನು ಇತ್ತೀಚೆಗೆ ಪ್ರಕಟಿಸಲಾಗಿತ್ತು. ಬಾಲಿವುಡ್‌ ನಟ ಅಮಿತಾಭ್ ಬಚ್ಚನ್ ಅವರನ್ನು ಒಳಗೊಂಡ ಪ್ರಚಾರದ ವಿಡಿಯೊವೊಂದರಲ್ಲಿ ತೆಂಡೂಲ್ಕರ್ ಕೂಡ ಲೀಗ್‌ನ ಭಾಗವಾಗಲಿದ್ದಾರೆ ಎಂದು ತೋರಿಸಲಾಗಿತ್ತು. ಆದರೆ ಇದನ್ನು ಎಸ್‌ಆರ್‌ಟಿ ಎಸ್‌ಆರ್‌ಟಿ ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್‌ ವಕ್ತಾರರು ತಿರಸ್ಕರಿಸಿದ್ದಾರೆ. ಎಲ್‌ಎಲ್‌ಸಿ ಇದೇ 20ರಂದು ಆರಂಭವಾಗಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.