ಉತ್ತಮ ಸಾಮರ್ಥ್ಯ ತೋರದಿದ್ದರೆ ಅವಕಾಶವಿಲ್ಲ- ಕೋಚ್‌ ರಮೇಶ್ ಪೊವಾರ್‌ ಮುಂಬೈ: ‘ಉತ್ತಮ ಸಾಮರ್ಥ್ಯ ತೋರದಿದ್ದರೆ ಅವಕಾಶ ಪಡೆಯಲು ಸಾಧ್ಯವಿಲ್ಲ‘ ಎಂದಿರುವಭಾರತ ಮಹಿಳಾ ತಂಡದ ಕೋಚ್‌ ರಮೇಶ್ ಪೊವಾರ್‌ ಅವರು, ಏಕದಿನ ವಿಶ್ವಕಪ್ ಟೂರ್ನಿಗೆ ಜೆಮಿಮಾ ರಾಡ್ರಿಗಸ್ ಮತ್ತು ಶಿಖಾ ಪಾಂಡೆ ಅವರನ್ನು ಆಯ್ಕೆ ಮಾಡದಿರುವುದನ್ನು ಸಮರ್ಥಿಸಿಕೊಂಡಿದ್ದಾರೆ. ನ್ಯೂಜಿಲೆಂಡ್‌ನಲ್ಲಿ ಏಕದಿನ ಸರಣಿ ಮತ್ತು ಅದರ ಬಳಿಕ ನಡೆಯುವ ವಿಶ್ವಕಪ್‌ ಟೂರ್ನಿಗೆ ತೆರಳುವ ಮೊದಲು ವರ್ಚುವಲ್ ಮಾಧ್ಯಮ ಸಂವಾದದಲ್ಲಿ ಪೊವಾರ್ ಮತ್ತು ತಂಡದ ನಾಯಕಿ ಮಿಥಾಲಿ ರಾಜ್ ಮಾತನಾಡಿದರು. ‘ಪ್ರತಿಯೊಬ್ಬ ಆಟಗಾರ್ತಿಗೂ ತಮ್ಮ ಸಾಮರ್ಥ್ಯದ ಬಗ್ಗೆ ಅರಿವಿರುತ್ತದೆ. ನಾವು ಅವರೊಂದಿಗೆ ಪ್ರತ್ಯೇಕ ಸಂವಹನ ನಡೆಸಬೇಕಾಗಿಲ್ಲ. ಏಕೆಂದರೆ ಐದು ಮಂದಿ ಆಯ್ಕೆದಾರರು, ನಾಯಕ ಮತ್ತು ಕೋಚ್ ಎಲ್ಲಾ ಆಟಗಾರ್ತಿರೊಂದಿಗೆ ಚರ್ಚಿಸಿ 18 ಮಂದಿಯ ತಂಡವನ್ನು ಆಯ್ಕೆ ಮಾಡಿದ್ದೇವೆ‘ ಎಂದು ಪೊವಾರ್ ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.