ಕ್ರಿಕೆಟ್: ಉಪಾಧ್ಯಾಯ, ಮೋಯಿನುದ್ದೀನ್ ಮಿಂಚು ಬೆಂಗಳೂರು: ತಲಾ ನಾಲ್ಕು ವಿಕೆಟ್ ಗಳಿಸಿದ ಅಭ್ಯುದಯ್ ಉಪಾಧ್ಯಾಯ ಮತ್ತು ಸೈಯದ್ ಖ್ವಾಜಾ ಮೊಯೀನುದ್ದೀನ್ ವರ ಬೌಲಿಂಗ್‌ನಿಂದಾಗಿ ಹನುಮಂತನಗರ ಕ್ರಿಕೆಟ್ ಕ್ಲಬ್ ತಂಡವು ಕೆಎಸ್‌ಸಿಎ ಮೂರನೇ ಡಿವಿಷನ್ ಲೀಗ್‌ನ ಮೊದಲ ಗುಂಪಿನ ಪಂದ್ಯದಲ್ಲಿ ಜಯಿಸಿತು. ಹನುಮಂತನಗರ ತಂಡವು 136 ರನ್‌ಗಳಿಂದ ಜಾಲಿ ಕ್ರಿಕೆಟ್ ಕ್ಲಬ್ ವಿರುದ್ಧ ಜಯಿಸಿತು. ಸಂಕ್ಷಿಪ್ತ ಸ್ಕೋರು: ಹನುಮಂತನಗರ ಸಿಸಿ: 50 ಓವರ್‌ಗಳಲ್ಲಿ 8ಕ್ಕೆ214 (ಆದರ್ಶ ವಿ ಹಿರೇಮಠ 43, ಗೌರವ್ 27,ಪಿ.ಎಸ್. ವಿಕ್ರಂ 53, ಪ್ರಜ್ವಲ್ ಪ್ರಕಾಶ್ 32, ಅನಾಸ್ ಶೇಖ್ ಔಟಾಗದೆ 39, ಮೊಹಮ್ಮದ್ ಅಜರುದ್ದೀನ್ 48ಕ್ಕೆ3), ಜಾಲಿ ಕ್ರಿಕೆಟಟರ್ಸ್: 29 ಓವರ್‌ಗಳಲ್ಲಿ 78 (ಅಭ್ಯುದಯ ಉಪಾಧ್ಯಾಯ 33ಕ್ಕೆ4, ಸೈಯದ್ ಖಾಜಾ ಮೊಯೀನುದ್ದೀನ್ 19ಕ್ಕೆ4) ಫಲಿತಾಂಶ: ಹನುಮಂತನಗರ ಸಿಸಿ: 4 ಪಾಯಿಂಟ್ಸ್ ಸೆಂಚುರಿ ಕ್ರಿಕೆಟಿಗರ್ಸ್: 50 ಓವರ್‌ಗಳಲ್ಲಿ 5ಕ್ಕೆ284 (ಆಶಿಶ್ ಧಾರ್ 67, ಸಿ.ಕೆ. ಅಕ್ಷಯ್ ಔಟಾಗದೆ 97, ಟಿ ಪ್ರದೀಪ್ ಔಟಾಗದೆ 47, ರಯಾನ್ ಅಹಮದ್ 41ಕ್ಕೆ4), ನೆಪ್ಚುನ್ ಸಿಸಿ: 25.2 ಓವರ್‌ಗಳಲ್ಲಿ 3ಕ್ಕೆ104 (ರಯಾನ್ ಅಹಮದ್ 28, ಡಿ.ಆರ್. ಗಣೇಶ್ 47, ಎನ್. ಭರತ್ 29ಕ್ಕೆ2), ಫಲಿತಾಂಶ: ಪಂದ್ಯಕ್ಕೆ ಮಳೆ ಅಡ್ಡಿ, ರನ್‌ರೇಟ್ ಆಧಾರದಲ್ಲಿ ಸೆಂಚುರಿ ಕ್ರಿಕೆಟರ್ಸ್ ಗೆ 4 ಪಾಯಿಂಟ್ ಕ್ಯಾವಲರ್ಸ್ ಸಿಸಿ: 49.4 ಓವರ್‌ಗಳಲ್ಲಿ 285 (ಎಂ.ವಿ. ಶ್ರೇಯಸ್ ಗೌಡ 42, ಧೀರಜ್ ಸೋಮಯ್ಯ 65, ಅತೀಶ್ ಜೈಕುಮಾರ್ 31, ಯಶಸ್ ಸುರೇಶ್ 34, ಎನ್. ನಿರಂಜನ್ 57, ಎಂ. ಪಿ ಸುರೇಶ್ 42ಕ್ಕೆ3, ಕೆ. ನಾಗೇಂದ್ರ 68ಕ್ಕೆ5), ಹೆಮಂಡ್ಸ್ ಸಿಸಿ; 44 ಓವರ್‌ಗಳಲ್ಲಿ 5ಕ್ಕೆ280 (ತರುಣ್ ಮನೋಹರ್ 32, ಅರವಿಂದ್ 110, ಧನುಷ್ ಸುಬ್ರಮಣ್ಯ 44, ಶರಣಬಸವ 46, ಯಶಸ್ವಿ ಸುರೇಶ್ 56ಕ್ಕೆ2) ಪಂದ್ಯಕ್ಕೆ ಮಳೆ ಅಡ್ಡಿ. ರನ್‌ರೇಟ್ ಆಧಾರದಲ್ಲಿ ಹಮಂಡ್ಸ್‌ ಸಿಸಿಗೆ 4 ಅಂಕ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.