ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ಗೆ ನಿರಾಶೆ ಬೆಂಗಳೂರು: ಬೆಂಗಳೂರು ಬುಲ್ಸ್ ತಂಡದ ನಾಯಕ ಪವನ್ ಕುಮಾರ್ ಶೆರಾವತ್ ಅವರಿಗೆ ಅದೃಷ್ಟ ಕೈಕೊಟ್ಟಿತು. ವೈಟ್‌ಫೀಲ್ಡ್‌ನ ಗ್ರ್ಯಾಂಡ್ ಶೆರಟಾನ್ ಹೋಟೆಲ್‌ನಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಟೂರ್ನಿಯಲ್ಲಿ ತಾವು ಆಡಿದ ಎಲ್ಲ ಪಂದ್ಯಗಳಲ್ಲಿಯೂ ಪವನ್ ಮಿಂಚಿದ್ದಾರೆ. ಭಾನುವಾರ ನಡೆದ ಗುಜರಾತ್ ಜೈಂಟ್ಸ್ ವಿರುದ್ಧವೂ 12 ಅಂಕ ಗಳಿಸಿದರು. ಆದರೆ, ಪ್ರದೀಪ್ ಕುಮಾರ್ 14 ಅಂಕ ಗಳಿಸಿ ಗುಜರಾತ್ ತಂಡಕ್ಕೆ ಜಯದ ಮಾಲೆ ಹಾಕಿದರು. ಬುಲ್ಸ್ ತಂಡವು 36–40ರಿಂದ ಗುಜರಾತ್ ಎದುರು ಸೋತಿತು. ಬುಲ್ಸ್ ತಂಡದ ಭರತ್ 11 ಮತ್ತು ಅಮನ್ ನಾಲ್ಕು ಅಂಕಗಳನ್ನು ಗಳಿಸಿದರು. ಗುಜರಾತ್ ತಂಡದ ಅಜಯಕುಮಾರ್ (8) ಮತ್ತು ಸುನೀಲ್ ಕುಮಾರ್ (5) ಪ್ರದೀಪ್ ಜೊತೆಗೆ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.ಇನ್ನೊಂದು ಪಂದ್ಯದಲ್ಲಿ ಪಟ್ನಾ ಪೈರೆಟ್ಸ್ ತಂಡವು 38–29ರಿಂದ ಬೆಂಗಾಲ್ ವಾರಿಯರ್ಸ್ ವಿರುದ್ಧ ಜಯಿಸಿತು. ಸಚಿನ್ (11) ಗುಮಾನ್ ಸಿಂಗ್ (7) ಅವರ ಆಟದ ಬಲದಿಂದ ಪಟ್ನಾ ತಂಡವು ಜಯಭೇರಿ ಬಾರಿಸಿತು. ಬೆಂಗಾಲ್ ತಂಡದ ಮನೋಜ್ ಗೌಡ (9) ಮತ್ತು ಮೊಹಮ್ಮದ್ (8) ಕೂಡ ಮಿಂಚಿದರು. ಆದರೆ ತಂಡಕ್ಕೆ ಜಯ ಒಲಿಯಲಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.